ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಪೊಗರು ಸಿನಿಮಾದಲ್ಲಿ ಹೊಡೆದಾಡಿದ್ದ ವಿಶ್ವ ವಿಖ್ಯಾತ ಬಾಡಿ ಬಿಲ್ಡರ್ ಜೋ ಲಿಂಡ್ನರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
30 ವರ್ಷದ ಜೋ ಲಿಂಡ್ನರ್ ಹಠಾತ್ ನಿಧನ ಶಾಕ್ ನೀಡಿದೆ. ಅವರ ಸಾವಿಗೆ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ಜೊತೆ ಪೊಗರು ಸಿನಿಮಾದಲ್ಲಿ ಅಖಾಡದಲ್ಲಿ ಗುದ್ದಾಡುವ ದೃಶ್ಯ ಭಾರೀ ಹಿಟ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯ ಫಾಲೋವರ್ ಗಳನ್ನು ಹೊಂದಿದ್ದ ಜೋ ಲಿಂಡ್ನರ್ ಯೂ ಟ್ಯೂಬರ್ ಆಗಿಯೂ ಗುರುತಿಸಿಕೊಂಡಿದ್ದರು.