Webdunia - Bharat's app for daily news and videos

Install App

ವಿಮಾನ ದುರಂತದಿಂದ ಪಾರಾದ ಬಳಿಕ ಪತ್ನಿ, ಮಕ್ಕಳ ಮುಂದೆ ಭಾವುಕರಾದ ಧ್ರುವ ಸರ್ಜಾ

Krishnaveni K
ಬುಧವಾರ, 21 ಫೆಬ್ರವರಿ 2024 (10:47 IST)
Photo Courtesy: Instagram
ಬೆಂಗಳೂರು: ಮಾರ್ಟಿನ್ ಸಿನಿಮಾ ಚಿತ್ರೀಕರಣಕ್ಕೆಂದು ಹೋಗಿದ್ದಾಗ ವಿಮಾನ ದುರಂತದಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಂಡಿದ್ದ ನಟ ಧ್ರುವ ಸರ್ಜಾ ಪತ್ನಿ, ಮಕ್ಕಳೊಂದಿಗಿರುವ ಭಾವುಕ ಕ್ಷಣದ ಫೋಟೋವೊಂದನ್ನು ಹಂಚಿಕೊಂಡಿದ್ದರು.

ನಿನ್ನೆಯಷ್ಟೇ ಧ್ರುವ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ವಿಮಾನದಲ್ಲಿರುವ ವಿಡಿಯೋ ಪ್ರಕಟಿಸಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದೆವು ಎಂದಿದ್ದರು. ಸಾವಿನ ಸನಿಹ ಹೋಗಿ ಬಂದೆವು. ಇಂತಹದ್ದೊಂದು ಕೆಟ್ಟ ಗಳಿಗೆ ಜೀವನದಲ್ಲಿ ಆಗಿರಲಿಲ್ಲ. ಸುರಕ್ಷಿತವಾಗಿ ನಮ್ಮನ್ನು ತಲುಪಿಸಿದ್ದಕ್ಕೆ ಧನ್ಯವಾದ ಎಂದು ಸಂದೇಶ ಬರೆದಿದ್ದರು.

ಶ್ರೀನಗರದಿಂದ ದೆಹಲಿಗೆ ಬರುತ್ತಿದ್ದಾಗ ಮಾರ್ಟಿನ್ ಚಿತ್ರತಂಡವಿದ್ದ ವಿಮಾನ ಅಪಘಾತವಾಗುವುದರಲ್ಲಿತ್ತು. ಆದರೆ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಧ್ರುವ ಇಂತಹದ್ದೊಂದು ವಿಡಿಯೋ ಹಾಕುತ್ತಿದ್ದಂತೇ ಹಲವರು ಆತಂಕ ವ್ಯಕ್ತಪಡಿಸಿದ್ದರು.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಧ್ರುವ ತಮ್ಮ ಕುಟುಂಬದದೊಂದಿಗಿರುವ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ಪತ್ನಿಯನ್ನು ತಬ್ಬಿಕೊಂಡು ಮುತ್ತಿಕ್ಕುವ ಮತ್ತು ಮಕ್ಕಳೊಂದಿಗಿರುವ ಫೋಟೋವನ್ನು ಪ್ರಕಟಿಸಿ ದೇವರಿದ್ದಾನೆ ಎಂದು ಬರೆದುಕೊಂಡಿದ್ದಾರೆ.

ಕೆಲವೇ ವರ್ಷದ ಹಿಂದೆ ಸರ್ಜಾ ಕುಟುಂಬ ಚಿರಂಜೀವಿ ಸರ್ಜರನ್ನು ಕಳೆದುಕೊಂಡಿತ್ತು. ಆ ನೋವು ಎಂದಿಗೂ ವಾಸಿಯಾಗದ ಗಾಯವಾಗಿ ಉಳಿದುಕೊಂಡಿದೆ. ಇದರ ಬೆನ್ನಲ್ಲೇ ಧ‍್ರುವಗೆ ಹೀಗಾಗಿರುವುದು ಸರ್ಜಾ ಕುಟುಂಬಕ್ಕೆ ಆತಂಕ ತಂದಿತ್ತು. ಆದರೆ ಅದೃಷ್ಟವಶಾತ್ ಧ್ರುವ ಪಾರಾಗಿದ್ದು, ಅಭಿಮಾನಿಗಳು, ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಜೈಲು ಹಕ್ಕಿ ದರ್ಶನ್ ಗೆ ಇಂದು ಪತ್ನಿ ನೋಡೋ ಭಾಗ್ಯ

ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ದರ್ಶನ್ ಪರ ಅಖಾಡಕ್ಕಿಳಿದ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಕಳುಹಿಸಿದ್ರು ಸ್ಪಷ್ಟ ಸಂದೇಶ

ಮುಂದಿನ ಸುದ್ದಿ
Show comments