Select Your Language

Notifications

webdunia
webdunia
webdunia
webdunia

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಚಿತ್ರಗುರ್ಗಾ ರೇಣುಕಾಸ್ವಾಮಿ ಪ್ರಕರಣ

Sampriya

ಬೆಂಗಳೂರು , ಬುಧವಾರ, 6 ಆಗಸ್ಟ್ 2025 (18:39 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ರದ್ದು ಮಾಡಬೇಡಿ ಎಂದು ಸುಪ್ರೀಂ ಕೋರ್ಟ್‌ಗೆ ಮನವಿಯನ್ನು ಮಾಡಿದ್ದಾರೆ. 

ನನಗೆ 10ನೇ ತರಗತಿಯಲ್ಲಿ ಓದುತ್ತಿರುವ ಮಗಳಿದ್ದಾಳೆ. ನಾನು ಒಬ್ಬಂಟಿ ಪೋಷಕಳಾಗಿದ್ದು, ಅಷ್ಟೇ ಅಲ್ಲದೆ ನನಗೆ ವಯಸ್ಸಾದ ಪೋಷಕರು ಇದ್ದಾರೆ. ಅವರ ಜವಾಬ್ದಾರಿ ನಾನೇ ನೋಡಿಕೊಳ್ಳಬೇಕಿದೆ. 

ನನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ, ರೇಣುಕಾಸ್ವಾಮಿ ಮೃತದೇಹದ ಮೇಲಿನ ಗಾಯಗಳು ನನ್ನಿಂದ ಆಗಿಲ್ಲ. ಅಪಹರಣ ಹಾಗೂ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದೇನೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಈ ಪ್ರಕರಣದಲ್ಲೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು. 

ಚಿತ್ರದುರ್ಗಾದ ರೇಣುಕಾಸ್ವಾಮಿ ಕಿಡ್ನ್ಯಾಪ್ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋ‍ಪಿಯಾಗಿದ್ದು, ದರ್ಶನ್ ಎ2 ಆರೋಪಿಯಾಗಿದ್ದೇನೆ. ಪ್ರಕರಣದ ಸಂಬಂಧ 7 ಜನ ಆರೋಪಿಗಳಿಗೆ ಹೈಕೋರ್ಟ್‌ ನೀಡಿದ ಜಾಮೀನನನ್ನು ರದ್ದು ಮಾಡುವಂತೆ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ವಾದ ಪ್ರತಿವಾದವನ್ನು ಆಲಿಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇಡಿ ಮುಂದೇ ಹಾಜರಾದ ವಿಜಯ್ ದೇವರಕೊಂಡ ಹೀಗಂದ್ರು