ಬೆಂಗಳೂರು: ಕೈವ ಸಿನಿಮಾದ ಟೀಸರ್ ಲಾಂಚ್ ವೇಳೆ ನಾಯಕ ನಟ ಧನ್ವೀರ್ ಕುತ್ತಿಗೆಯಲ್ಲಿದ್ದ ಲಾಕೆಟ್ ಎಲ್ಲರ ಗಮನ ಸೆಳೆಯಿತು.
ಈ ಸಿನಿಮಾದ ಪೋಸ್ಟರ್ ನಲ್ಲಿ ಧನ್ವೀರ್ ಹುಲಿ ಉಗುರು ಹೋಲುವ ಲಾಕೆಟ್ ನ್ನು ಧರಿಸಿದ್ದಾರೆ. ಹೀಗಾಗಿ ವೇದಿಕೆಯಲ್ಲಿ ಮಾತನಾಡುವಾಗ ಪತ್ರಕರ್ತರು ಇದರ ಬಗ್ಗೆ ಸ್ಪಷ್ಟನೆ ಕೊಟ್ಟು ಬಿಡಿ ಎಂದರು.
ಆಗ ಧನ್ವೀರ್ ನಮ್ಮ ತಾಯಾಣೆಗೂ ಇದು ನಿಜವಾದ ಹುಲಿ ಉಗುರಿನ ಪೆಂಡೆಂಟ್ ಅಲ್ಲ. ಪ್ಲಾಸ್ಟಿಕ್ ಲಾಕೆಟ್ ಎಂದು ಸ್ಪಷ್ಟನೆ ನೀಡಿದಾಗ ನೆರೆದಿದ್ದವರಿಗೆ ನಗುವೋ ನಗು. ಇತ್ತೀಚೆಗೆ ಹುಲಿ ಉಗುರಿನ ಪೆಂಡೆಂಟ್ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನೈಜ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಅನುಮಾನದಲ್ಲಿ ಕೆಲವು ನಟರ ಮೇಲೆ ಅರಣ್ಯಾಧಿಕಾರಿಗಳು ಕೇಸ್ ಕೂಡಾ ದಾಖಲಿಸಿದ್ದರು.