Select Your Language

Notifications

webdunia
webdunia
webdunia
webdunia

ಕೊರಾನಾ ಸಂಕಷ್ಟದಲ್ಲಿ ವನ್ಯ ಜೀವಿಗಳ ದತ್ತು ಪಡೆದ ಯುವ ನಟ ಧನ್ವೀರ್

ಕೊರಾನಾ ಸಂಕಷ್ಟದಲ್ಲಿ ವನ್ಯ ಜೀವಿಗಳ ದತ್ತು ಪಡೆದ ಯುವ ನಟ ಧನ್ವೀರ್
ಬೆಂಗಳೂರು , ಸೋಮವಾರ, 17 ಮೇ 2021 (10:41 IST)
ಬೆಂಗಳೂರು: ಕೊರೋನಾ ಸಂಕಷ್ಟ ಕಾಲ ಪ್ರಾಣಿಗಳ ಮೇಲೂ ತಗುಲಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಲಾಕ್ ಡೌನ್ ನಿಂದಾಗಿ ಬೀದಿ ನಾಯಿಗಳಿಗೂ ಆಹಾರವಿಲ್ಲದಂತಾಗಿದೆ. ಹೀಗಾಗಿ ಸೆಲೆಬ್ರಿಟಿಗಳು ಪ್ರಾಣಿಗಳ ಮೇಲೆ ದಯೆ ತೋರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಬರೆಯುತ್ತಲೇ ಇರುತ್ತಾರೆ.


ಈ ನಡುವೆ ಯುವ ನಟ ಧನ್ವೀರ್ ಗೌಡ ವನ್ಯ ಜೀವಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಶಿವಮೊಗ್ಗ ಮೃಗಾಲಯದಲ್ಲಿನ ಎರಡು ಚಿರತೆಗಳನ್ನು ದತ್ತು ಪಡೆದಿರುವ ಧನ್ವೀರ್ ಅವುಗಳ ಪೋಷಣೆ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ.

ಕಳೆದ ವರ್ಷವೂ ಧನ್ವೀರ್ ಪ್ರಾಣಿಗಳ ದತ್ತು ಪಡೆಯುವ ಮೂಲಕ ಸುದ್ದಿಯಾಗಿದ್ದರು. ಈ ವರ್ಷವೂ ಮತ್ತೆ ಲಾಕ್ ಡೌನ್ ವೇಳೆ ಅವುಗಳ ರಕ್ಷಣೆಗೆ ಮುಂದಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಜೆಕೆ ಅಭಿನಯದ ಐರಾವನ್ ತಂಡದಿಂದ ಕೊರೋನಾ ಪೀಡಿತರಿಗೆ ಸಹಾಯ