Webdunia - Bharat's app for daily news and videos

Install App

ಅಬ್ದುಲ್‌ ಕಲಾಂ ಪಾತ್ರಕ್ಕೆ ಜೀವತುಂಬಲಿದ್ದಾರೆ ಧನುಷ್‌: ತೆರೆ ಮೇಲೆ ಬರಲಿದೆ ಮಿಸೈಲ್ ಮ್ಯಾನ್ ಕಹಾನಿ

Sampriya
ಗುರುವಾರ, 22 ಮೇ 2025 (14:19 IST)
Photo Courtesy X
ಮುಂಬೈ: ಬಾಲಿವುಡ್‌ ನಿರ್ದೇಶಕ ಓಂ ರಾವುತ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ಧಾರೆ. ಬುಧವಾರ ರಾತ್ರಿ 78ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಓಂ ರಾವುತ್ ತನ್ನ ಬಹುನಿರೀಕ್ಷಿತ ಸಿನಿಮಾವನ್ನು ಘೋಷಿಸಿದ್ದಾರೆ. ಆ ಸಿನಿಮಾಕ್ಕೆ ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದು ಸಿನಿಮಾಕ್ಕೆ ಟೈಟಲ್‌ ಇಡಲಾಗಿದೆ.

ತಮಿಳು ಸೂಪರ್‌ ಸ್ಟಾರ್‌ ಧನುಷ್‌ ಅಬ್ದುಲ್‌ ಕಲಾಂ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಮ್ಮದೇ ಆದ ಡಾ. ಎಪಿಜೆ ಅಬ್ದುಲ್ ಕಲಾಂ ಸರ್, ಅಂತಹ ಸ್ಪೂರ್ತಿದಾಯಕ ಮತ್ತು ಉದಾತ್ತ ನಾಯಕನ ಜೀವನವನ್ನು ಚಿತ್ರಿಸಲು ನಾನು ನಿಜವಾಗಿಯೂ ಧನ್ಯ ಮತ್ತು ಅತ್ಯಂತ ವಿನಮ್ರನಾಗಿದ್ದೇನೆ ಎಂದು ಧನುಷ್‌ ಬರೆದುಕೊಂಡಿದ್ದಾರೆ.

ರಾಮೇಶ್ವರಂನಿಂದ ರಾಷ್ಟ್ರಪತಿ ಭವನಕ್ಕೆ ದಂತಕಥೆಯ ಪ್ರಯಾಣ ಪ್ರಾರಂಭವಾಗುತ್ತದೆ. ಭಾರತದ ಮಿಸೈಲ್ ಮ್ಯಾನ್ ಬೆಳ್ಳಿತೆರೆಗೆ ಬರುತ್ತಿದ್ದಾರೆ. ದೊಡ್ಡ ಕನಸು ಕಾಣಿರಿ. ಎತ್ತರಕ್ಕೆ ಏರಿ ಎಂದು ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿ ಬರೆದುಕೊಂಡಿದ್ದಾರೆ.

ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಬದುಕನ್ನು ತೆರೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಚಿತ್ರದ ರಿಲೀಸ್‌ ಡೇಟ್‌ ಹಾಗೂ ಇತರೆ ಯಾವ ಮಾಹಿತಿಯನ್ನು ಕೂಡ ಸದ್ಯ ಚಿತ್ರತಂಡ ಹಂಚಿಕೊಂಡಿಲ್ಲ.

ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಸಿನಿಮಾವನ್ನು ಅಭಿಷೇಕ್ ಅಗರ್ವಾಲ್‌, ಭೂಷಣ್ ಕುಮಾರ್, ಕ್ರಿಷನ್ ಕುಮಾರ್, ಅನಿಲ್ ಸುಂಕರ ನಿರ್ಮಾಣ ಮಾಡುತ್ತಿದ್ದಾರೆ. ಸೈವಿನ್ ಕ್ವಾಡ್ರಾಸ್ ಅವರು ಈ ಸಿನಿಮಾಗೆ ಚಿತ್ರಕಥೆ ಬರೆಯುತ್ತಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಏನಾದ್ರೂ ಸರಿ ನಮ್ಮ ಸಿನಿಮಾ ಕ್ರಿಸ್ ಮಸ್ ಗೇ ಬರೋದು: ಕಿಚ್ಚ ಸುದೀಪ್ ಖಡಕ್ ಮಾತು

ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ಗೈರಾಗಿದ್ದಕ್ಕೆ ಶ್ರೀದೇವಿ ಬೈರಪ್ಪ ಅಲ್ಲ ಇವರೇ ಕಾರಣ

ನಟ ಚಿಕ್ಕಣ್ಣ ಮದುವೆ ಫಿಕ್ಸ್: ಉಪಾಧ್ಯಕ್ಷನ ಮನಸ್ಸು ಕದ್ದವಳು ಯಾರು

ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿಯಾದ ತೆಲುಗು ನಟ ರಾಮ್‌ ಚರಣ್‌

ಬರ್ತ್‌ಡೇಗೂ ಮುನ್ನ ಮೈಸೂರಿನಲ್ಲಿ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments