Webdunia - Bharat's app for daily news and videos

Install App

ನಟಿ ನಯನತಾರಾಗೆ ವಿಡಿಯೊ ತೆಗೆದುಹಾಕಲು ಧನುಷ್‌ ವಕೀಲರ ಗಡುವು

Sampriya
ಸೋಮವಾರ, 18 ನವೆಂಬರ್ 2024 (14:42 IST)
Photo Courtesy X
ಚೆನ್ನೈ: ನಟ ಧನುಷ್ ಮತ್ತು ನಟಿ ನಯನತಾರಾ ನಡುವಿನ ಸಮರ ಮತ್ತಷ್ಟು ಕಾವೇರಿದೆ. ಪ್ರಕರಣದಲ್ಲಿ ಧನುಷ್ ಪರ ವಕೀಲ  ಅರುಣ್, ಮಧ್ಯಪ್ರವೇಶ ಮಾಡಿದ್ದು, 24 ಗಂಟೆಗಳಲ್ಲಿ ವಿವಾದಿತ ವಿಡಿಯೋವನ್ನು ತೆಗೆದುಹಾಕದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಯನತಾರಾಗೆ ಎಚ್ಚರಿಕೆ ನೀಡಿದ್ದಾರೆ.

ವಿವಾದಿತ ವಿಡಿಯೋ ಕುರಿತು ನಟ ಧನುಷ್ ₹ 10 ಕೋಟಿ ಪರಿಹಾರ ಕೇಳಿ ನೋಟಿಸ್ ಕಳುಹಿಸಿದ ಬೆನ್ನಲ್ಲೇ ಧನುಷ್ ವಿರುದ್ಧ ಕೆಂಡಾಮಂಡಲರಾಗಿದ್ದ ನಟಿ ನಯನತಾರಾ ಹಲವು ಪುಟಗಳ ಬಹಿರಂಗ ಪತ್ರ ಬರೆದಿದ್ದರು.

24 ಗಂಟೆಗಳ ಒಳಗೆ ವಿಡಿಯೋ ತೆಗೆದುಹಾಕಿ ಅಥವಾ... ಕಠಿಣ ಕಾನೂನು ಕ್ರಮ ಎದುರಿಸಿ ಎಂದು ಧನುಷ್ ಪರ ವಕೀಲ  ಅರುಣ್ ಎಚ್ಚರಿಕೆ ನೀಡಿದ್ದಾರೆ. ನಾನೂ ರೌಡಿ ಧಾನ್ ಚಿತ್ರದ ಮೇಲೆ ನನ್ನ ಕಕ್ಷಿದಾರನ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ವಿಷಯವನ್ನು 24 ಗಂಟೆಗಳ ಒಳಗೆ ನಿಮ್ಮ ಕ್ಲೈಂಟ್‌ ನಯನತಾರಾ ಅವರ ಬಿಯಾಂಡ್ ದಿ ಫೇರಿಟೇಲ್ ಎಂಬ ಹೆಸರಿನ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದನ್ನು ತೆಗೆದುಹಾಕಲು ನಿಮ್ಮ ಕ್ಲೈಂಟ್‌ಗೆ ಸಲಹೆ ನೀಡಿ ಎಂದು ವಕೀಲರು ಸೂಚಿಸಿದ್ದಾರೆ.

ಒಂದು ವೇಳೆ ವಿವಾದಿತ ವಿಡಿಯೋ ಕಟೆಂಟ್ ತೆಗೆಯದಿದ್ದರೆ ನಿಮ್ಮ ಕ್ಲೈಂಟ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾದ ವಿರುದ್ಧ ₹ 10 ಕೋಟಿ ರೂ.ಗಳ ಮೊತ್ತಕ್ಕೆ ಹಾನಿಯಾಗುವುದು ಸೇರಿದಂತೆ ಸೂಕ್ತ ಕಾನೂನು ಕ್ರಮವನ್ನು ಪ್ರಾರಂಭಿಸಲು ಒತ್ತಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ನಯನತಾರಾ ಆರೋಪಕ್ಕೆ ನಟ ಧನುಷ್ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ವಕೀಲ ಅರುಣ್ ಹೇಳಿದ್ದು, ಆರೋಪಗಳಿಗೆಲ್ಲಾ ನಟ ಧನುಷ್​ ಉತ್ತರ ನೀಡ್ತಾರೆ. ಯಾವುದೇ ವಿಷಯವಾದ್ರು ನಟ ಧನುಷ್ ನಿರ್ಧಾರ ತೆಗೆದುಕೊಳ್ತಾರೆ. ಧನುಷ್ ಏನು ಬೇಕಾದರೂ ಅನೌನ್ಸ್ ಮಾಡಬಹುದು ಎಂದು ವಕೀಲ ಅರುಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟಿಗನ ಜತೆ ಪ್ರೀತಿಯಲ್ಲಿ ಬಿದ್ರಾ ರಶ್ಮಿಕಾ ಮಂದಣ್ಣ, ಇದಕ್ಕೆ ಕಾರಣ ಈ ಫೋಟೋ

ಈಕೆಯಾ ಮಹಾಕುಂಭಮೇಳದ ವೈರಲ್ ಹುಡುಗಿ ಅನ್ನುವಷ್ಟರ ಮಟ್ಟಿಗೆ ಬದಲಾದ ಮೊನಲಿಸಾ, Video

Mysore Sandal Soap: ತಮನ್ನಾ ಭಾಟಿಯಾರನ್ನು ವಜಾಗೊಳಿಸುವಂತೆ ಹೆಚ್ಚಿದ ಒತ್ತಾಯ

Actor Darshan: ಪವಿತ್ರಾ ಗೌಡ ಹೊಸ ಸ್ಟೇಟಸ್ ಹಿಂದಿನ ಟಾರ್ಗೆಟ್ ಯಾರು

Madenur Manu: ಗಂಡನ ಮೇಲೆ ಬಂದಿರುವ ರೇಪ್ ಕೇಸ್ ಬಗ್ಗೆ ಮಡೆನೂರು ಮನು ಪತ್ನಿ ಶಾಕಿಂಗ್ ಹೇಳಿಕೆ

ಮುಂದಿನ ಸುದ್ದಿ
Show comments