ದೀಪಕ್ ಜೊತೆ ರಹಸ್ಯ ಮದುವೆಯಾಗಿಲ್ಲ: ದೀಪಿಕಾ ದಾಸ್ ಸ್ಪಷ್ಟನೆ

Krishnaveni K
ಸೋಮವಾರ, 11 ಮಾರ್ಚ್ 2024 (09:03 IST)
ಬೆಂಗಳೂರು: ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಮದುವೆ ರಿಸೆಪ್ಷನ್ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಸಿನಿ ಸ್ನೇಹಿತರು, ಮಾಧ್ಯಮಗಳನ್ನು ಆಹ್ವಾನಿಸಿದ್ದರು.

ಇಬ್ಬರೂ ಕಳೆದ ವಾರ ಗೋವಾದಲ್ಲಿ ಮದುವೆಯಾಗಿದ್ದು ದಿಡೀರ್ ಆಗಿ ಫೋಟೋ ಪ್ರಕಟಿಸಿ ಎಲ್ಲರಿಗೂ ಸರ್ಪೈಸ್ ನೀಡಿದ್ದರು. ಈ ವೇಳೆ ದೀಪಿಕಾ ಗುಟ್ಟಾಗಿ ಮದುವೆ ಆದರು ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು. ಆದರೆ ರಿಸೆಪ್ಷನ್ ಸಂದರ್ಭದಲ್ಲಿ ಮಾಧ‍್ಯಮಗಳ ಮುಂದೆ ದೀಪಿಕಾ ತಮ್ಮಿಬ್ಬರ ಪ್ರೀತಿ, ಮದುವೆ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

‘ನಾವು ಗುಟ್ಟಾಗಿ ಮದುವೆಯಾಗಿದ್ದಲ್ಲ. ನನಗೆ ಡೆಸ್ಟಿನೇಷನ್ ಮದುವೆಯಾಗಬೇಕೆಂದು ಆಸೆಯಿತ್ತು. ಅದಕ್ಕೇ ಗೋವಾದಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡಿದ್ದೆವು. ಆದರೆ ಇದು ಕಷ್ಟ ಎಂದು ಗೊತ್ತಿದ್ದರೂ ದೀಪಕ್ ನನಗೋಸ್ಕರ ಕಷ್ಟಪಟ್ಟರು. ನಾವಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಿಚಿತರು. ಆದರೆ ಕಳೆದ ಒಂದು ವರ್ಷದಿಂದ ರಿಲೇಷನ್ ಶಿಪ್ ನಲ್ಲಿದ್ದೆವು ಅಷ್ಟೇ. ನಾನು ಅಂದುಕೊಂಡ ರೀತಿಯ ಹುಡುಗನೇ ನನಗೆ ಸಿಕ್ಕಿದ್ದಾರೆ. ನಾನೇ ಕಮ್ಮಿ ಮಾತನಾಡುತ್ತೇನೆ. ದೀಪಕ್ ನನಗಿಂತ ಕಡಿಮೆ ಮಾತನಾಡುತ್ತಾರೆ. ನನ್ನ ಹುಡುಗ ಪಕ್ಕಾ ಕನ್ನಡಿಗ’ ಎಂದಿದ್ದಾರೆ.

ಬಳಿಕ ದೀಪಕ್ ಮಾತನಾಡಿದ್ದು, ನಾನು ದುಬೈನವನಲ್ಲ. ಇಲ್ಲೇ ಆರ್ ಆರ್ ನಗರದ ನಿವಾಸಿ. ಇಲ್ಲಿ ರಿಯಲ್ ಎಸ್ಟೇಟ್ ಉದ್ಯಮವಿದೆ. ದುಬೈನಲ್ಲಿ ಒಂದು ಐಟಿ ಕಂಪನಿಯಿದೆ. ಇಷ್ಟು ದಿನದಂತೆ ಮುಂದೆಯೂ ದೀಪಿಕಾಗೆ ಸಪೋರ್ಟ್ ಮಾಡಿ’ ಎಂದು ಕೇಳಿಕೊಂಡರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ಮುಂದಿನ ಸುದ್ದಿ
Show comments