Webdunia - Bharat's app for daily news and videos

Install App

ರಮ್ಯಾ ಆಮೇಲೆ, ಮೊದಲು ಯುವ ಪತ್ನಿಗೆ ನ್ಯಾಯ ಕೊಡಿಸಿ: ಶಿವಣ್ಣಗೆ ಡಿಬಾಸ್ ಫ್ಯಾನ್ಸ್ ಎಚ್ಚರಿಕೆ

Krishnaveni K
ಮಂಗಳವಾರ, 29 ಜುಲೈ 2025 (14:48 IST)
ಬೆಂಗಳೂರು: ರಮ್ಯಾಗೆ ಡಿಬಾಸ್ ಅಭಿಮಾನಿಗಳು ಅಶ್ಲೀಲ ಸಂದೇಶ ಕಳುಹಿಸಿರುವ ವಿಚಾರಕ್ಕೆ ಶಿವಣ್ಣ ಮೆಸೇಜ್ ಮಾಡಿದ್ದಾರೆ. ರಮ್ಯಾ ಬೆಂಬಲಿಸಿ ಮೆಸೇಜ್ ಹಾಕಿರುವ ಶಿವಣ್ಣನಿಗೆ ಮೊದಲು ಯುವ ಪತ್ನಿಗೆ ನ್ಯಾಯ ಕೊಡಿಸಿ ಎಂದು ದರ್ಶನ್ ಅಭಿಮಾನಿಗಳು ಹೇಳಿದ್ದಾರೆ.

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಪೋಸ್ಟ್ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಬೇರೆ ಬೇರೆ ಖಾತೆಯಿಂದ ರಮ್ಯಾಗೆ ಅಶ್ಲೀಲ ಸಂದೇಶ ಪ್ರಕಟಿಸಿ ನಿಂದಿಸಿದ್ದರು. ಇದರ ವಿರುದ್ಧ ರಮ್ಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಶಿವಣ್ಣ ಸೋಷಿಯಲ್ ಮೀಡಿಯಾ ಮೂಲಕ ರಮ್ಯಾ ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ.

ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ ಅಕ್ಕನಾಗಿ, ಮಗಳಾಗಿ ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಷಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಧ್ವೇಷ-ಅಸೂಯೆಗಳನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ’ ಎಂದು ಶಿವಣ್ಣ ಪೋಸ್ಟ್ ಮಾಡಿದ್ದರು.

ಆದರೆ ಅವರ ಈ ಪೋಸ್ಟ್ ಗೆ ಕೆಲವು ಡಿಬಾಸ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ನೀವು ರಮ್ಯಾ ಪರ ನಿಂತು ಮೆಸೇಜ್ ಮಾಡಿರುವುದು ಅಭಿನಂದನೀಯ. ಆದರೆ ನಿಮ್ಮದೇ ಮನೆಯಲ್ಲಿ ಯುವ ರಾಜ್ ಕುಮಾರ್ ಪತ್ನಿಗೆ ಅನ್ಯಾಯವಾಗಿದೆಯಲ್ಲಾ? ಅವರ ಬಗ್ಗೆನೂ ಗಮನಹರಿಸಿ. ಆಕೆಯೂ ಒಬ್ಬ ಹೆಣ್ಣಲ್ವೇ? ಮೊದಲು ಅವರಿಗೆ ನ್ಯಾಯ ಕೊಡಿಸಿ. ನಂತರ ರಮ್ಯಾ ಬಗ್ಗೆ ಮಾತನಾಡಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಊಹಿಸಲಾಗದ್ದನ್ನು ಸಾಧಿಸಿದ ರಿಷಭ್‌ ಶೆಟ್ಟಿ: ಕಾಂತಾರ 1 ಸಿನಿಮಾವನ್ನು ಕೊಂಡಾಡಿದ ಜ್ಯೂ.ಎನ್‌ಟಿಆರ್‌, ಶಿವಣ್ಣ

ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರು ಫಿದಾ: ರಿಷಭ್‌ ಶೆಟ್ಟಿ ಅಪ್ಪಿಕೊಂಡು ಪತ್ನಿ ಪ್ರಗತಿ ಭಾವುಕ

ಹಾಡು ನಿಲ್ಲಿಸಿದ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ: ಮೋದಿ ಕಂಬನಿ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಮುಂದಿನ ಸುದ್ದಿ
Show comments