Publish Date: Wed, 12 Aug 2020 (13:19 IST)
Updated Date: Wed, 12 Aug 2020 (13:22 IST)
ಬೆಂಗಳೂರು: ಇಂದು ವಿಶ್ವ ಆನೆಗಳ ದಿನವಾಗಿದ್ದು, ಪ್ರಾಣಿಪ್ರಿಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.
ವನ್ಯ ಜೀವಿಗಳ ಸಂರಕ್ಷಣೆಗಾಗಿ ವೈಲ್ಡ್ ಲೈಫ್ ಫೋಟೋಗ್ರಫಿ ಪ್ರದರ್ಶನ ಆಯೋಜಿಸಿ ಅದರಿಂದ ಬಂದ ಹಣವನ್ನು ವನ್ಯ ಜೀವಿಗಳ ಸಂರಕ್ಷಣೆಗೆ ಒದಗಿಸಿದ್ದ ದರ್ಶನ್, ಮೈಸೂರು ಮೃಗಾಲಯದಲ್ಲೂ ಪ್ರಾಣಿಗಳನ್ನು ದತ್ತು ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದರು.
ಇಂದು ಆನೆಗಳ ದಿನದ ನಿಮಿತ್ತ ಶುಭ ಕೋರಿರುವ ದರ್ಶನ್ ಅವುಗಳ ಸಂರಕ್ಷಣೆಗೆ ನಾವೆಲ್ಲರೂ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಕರೆ ಕೊಟ್ಟಿದ್ದಾರೆ.