Daily Horoscope
✕

ಜೈಲು ಶಿಫ್ಟ್ ನಡುವೆ ಇಂದು ದರ್ಶನ್ ಗೆ ಇಂದು ಮತ್ತೊಂದು ಮಹತ್ವದ ಪರೀಕ್ಷೆ

Krishnaveni K
ಬುಧವಾರ, 28 ಆಗಸ್ಟ್ 2024 (08:50 IST)
ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ಹಿನ್ನಲೆಯಲ್ಲಿ ನಟ ದರ್ಶನ್ ರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಕೋರ್ಟ್ ಒಪ್ಪಿಗೆ ನೀಡಿತ್ತು. ಜೈಲಿನಲ್ಲಿ ಮಾಡಿದ ತಪ್ಪಿಗೆ ಬೇರೆ ಜೈಲಿಗೆ ಶಿಫ್ಟ್ ಆಗುವುದರ ಜೊತೆಗೆ ದರ್ಶನ್ ಗೆ ಇಂದು ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿತ್ತು. ಆದರೆ ಇತ್ತೀಚೆಗೆ ಇಲ್ಲಿ ದರ್ಶನ್ ಗೆ ವಿಐಪಿ ಟ್ರೀಟ್ ಮೆಂಟ್ ಕೊಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಅವರ ಫೋಟೋ, ವಿಡಿಯೋಗಳು ವೈರಲ್ ಆಗಿತ್ತು.

ಈ ಹಿನ್ನಲೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ದರ್ಶನ್ ರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಸೂಚಿಸಿದ್ದರು. ಆದರೆ ದರ್ಶನ್ ಶಿಫ್ಟ್ ಮಾಡಲು ಕೋರ್ಟ್ ಒಪ್ಪಿಗೆ ಬೇಕಿತ್ತು. ಅದರಂತೆ ಪೊಲೀಸರು ಈಗ ಕೋರ್ಟ್ ಒಪ್ಪಿಗೆ ಪಡೆದು ದರ್ಶನ್ ರನ್ನು ಮತ್ತೊಂದು ಜೈಲಿಗೆ ವರ್ಗಾಯಿಸುತ್ತಿದ್ದಾರೆ.

ಈ ನಡುವೆ ಇಂದು ದರ್ಶನ್ ಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ದರ್ಶನ್ ಆಂಡ್ ಗ್ಯಾಂಗ್ ನ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಇಂದು  ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಇಂದೂ ಕೂಡಾ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗುವ ಸಾಧ್ಯತೆಯೇ ಹೆಚ್ಚು. ಅದಾದ ಬಳಿಕ ಅವರು ಬೇರೆ ಜೈಲಿಗೆ ವರ್ಗಾವಣೆಯಾಗಲಿದೆ. ಯಾಕೆಂದರೆ ದರ್ಶನ್ ಪರ ವಕೀಲರು ಇನ್ನೂ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಆದರೆ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇಂದು ಮತ್ತೆ ವಿಚಾರಣೆಗೆ ಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ನೀವು ಮದುವೆಯಾಗಿಲ್ಲಾಂದ್ರೆ ನಿಮ್ಮನ್ನೇ ಮದುವೆಯಾಗ್ತಿದ್ದೆ ಎಂದು ಸಂಗೀತಾ ಗಂಡನಿಗೆ ಹೇಳಿದ್ದರಂತೆ ಕಾವ್ಯಾ

ಚಿಲ್ಲರೆ ಬದಲಿಗೆ ಚಾಕಲೇಟ್ ನೀಡಿದಾಗ ನಾನಾ ಪಾಟೇಕರ್ ಏನು ಮಾಡಿದ್ರು: ಈ ಐಕಾನಿಕ್ ದೃಶ್ಯ ಈಗಲೂ ವೈರಲ್ Video

ನಟ ನಾನಾ ಪಾಟೇಕರ್ ಇನ್ನಿಲ್ಲ: ಹೃದಯಾಘಾತಕ್ಕೆ ಬಲಿಯಾಯ್ತು ಚಿತ್ರರಂಗದ ಮತ್ತೊಂದು ಪ್ರತಿಭೆ

ಚಿತ್ರದುರ್ಗದಲ್ಲಿ ಶಿವಣ್ಣನ ಎದುರೇ ಬ್ಲಾಸ್ಟ್ ಆದ ಪಟಾಕಿ: ಬೇಲ್ ಪ್ರಚಾರದ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ನಟ

BBK13: ಕಿಚ್ಚನ ಬುದ್ಧಿ ಮಾತಿಗೂ ಬೆಲೆ ಇಲ್ಲ.. ವೀಕೆಂಡ್ ನಲ್ಲಿ ತಪ್ಪಾಯ್ತು ಎನ್ನೋದು, ಗೇಮ್ ನಲ್ಲಿ ಮತ್ತದೇ ತಪ್ಪು ಮಾಡೋದು

ಮುಂದಿನ ಸುದ್ದಿ
Show comments