Webdunia - Bharat's app for daily news and videos

Install App

ದರ್ಶನ್ ಟೆಂಪನ್ ರನ್: ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ವಿಶೇಷ ಪೂಜೆ ಸಲ್ಲಿಕೆ

Sampriya
ಬುಧವಾರ, 18 ಜೂನ್ 2025 (15:43 IST)
ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಕುಟುಂಬದ ಜೊತೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೇರಳದ ಪ್ರಸಿದ್ಧ ಕೊಟ್ಟೆಯೂರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ಡೇವಿಲ್ ಚಿತ್ರೀಕರಣ ಮುಕ್ತಾಯದ ಬಳಿಕ ದೇವರ ಅನುಗ್ರಹ ಪಡೆಯಲು ನಟ ದರ್ಶನ್ ಟೆಂಪನ್ ರನ್ ಶುರು ಮಾಡಿದ್ದಾರೆ. ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. 

ಕೊಟ್ಟಿಯೂರು ಶಿವ ದೇವಾಲಯವು ಭಾರತದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷವೂ ವೈಶಾಖ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ದೇವಸ್ಥಾನವು ದಕ್ಷಿಣ ಕಾಶಿ ಎಂದು ಕರೆಯಲ್ಪಡುವುದರಿಂದ ಅದರ ಧಾರ್ಮಿಕ ಮಹತ್ವವು ಅಪಾರವಾಗಿದೆ.

ಇಲ್ಲಿ ನಡೆಯುವ ಜಾತ್ರೆ ಕೊಟ್ಟಿಯೂರು ಉತ್ಸವ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು, ಇದು ದಕ್ಷಿಣ ಭಾರತದ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಪಾರ್ವತಿಯ ತಪಸ್ಸು, ದಕ್ಷಿಣ ಯಾಗ ಮತ್ತು ಶೈವ ಪರಂಪರೆಯ ಕಥೆಗಳ ಸ್ಮರಣಾರ್ಥವಾಗಿ ಈ ಉತ್ಸವ ನಡೆಸಲಾಗುತ್ತದೆ.

ಈ ದೇವಸ್ಥಾನದ ವಿಶೇಷತೆ ಏನೆಂದರೆ, ವರ್ಷದಲ್ಲಿ ಎರಡು ತಿಂಗಳ ಕೆಲವು ದಿನಗಳು ಮಾತ್ರ ತೆರೆಯಲಾಗುತ್ತದೆ. ಅಲ್ಲದೇ 27ರಿಂದ 28 ದಿನಗಳವರೆಗೂ ಭಕ್ತರ ಭೇಟಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಸಾಮಾನ್ಯವಾಗಿ ಜೂನ್ 8ರಿಂದ ಜುಲೈ 4ರ ತನಕ ಈ ದೇವಸ್ಥಾನ ಭಕ್ತಾದಿಗಳ ಭೇಟಿಗೆ ಮುಕ್ತವಾಗಿರುತ್ತದೆ.  ಹೀಗಾಗಿ ಜೂನ್ ತಿಂಗಳಲ್ಲಿ ಈ ದೇವಸ್ಥಾನಕ್ಕೆ ಭಕ್ತರು ಮಾತ್ರವಲ್ಲದೆ ಪ್ರವಾಸಿಗರ ದಂಡೇ ಹರಿದುಬರುತ್ತದೆ.

ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ನಟ ದರ್ಶನ್ ಹೆಚ್ಚು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ . ಚಾಮುಂಡೇಶ್ವರಿ ದೇವಾಲಯ, ಗೌಡಗೆರೆ ಚಾಮುಂಡೇಶ್ವರಿ ದೇವಾಲಯ, ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಹಾಗೆಯೇ ಕೇರಳದ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಶತ್ರು ಸಂಹಾರ ಪೂಜೆಯನ್ನು ಸಹ ಮಾಡಿಸಿದ್ದರು.
<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹಿರಂಗವಾಗಿ ಕಾರಿನಲ್ಲಿ ಸುತ್ತಾಡಿದ ರಶ್ಮಿಕಾ ಮಂದಣ್ಣ–ವಿಜಯ್‌ ದೇವರಗೊಂಡ:ಗುಸುಗುಸು ಸುದ್ದಿಗೆ ಬ್ರೇಕ್‌

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು

ದರ್ಶನ್ ಟೆಂಪನ್ ರನ್: ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ವಿಶೇಷ ಪೂಜೆ ಸಲ್ಲಿಕೆ

ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

ಮುಂದಿನ ಸುದ್ದಿ
Show comments