ಸೂರಜ್, ಪ್ರಜ್ವಲ್ ಜತೆ ದರ್ಶನ್ ಫೋಟೋಗೆ ಫೋಸ್: ಸಾಮಾಜಿಕ ಜಾಲತಾಣದಲ್ಲಿ ವೈರಲ್

Sampriya
ಸೋಮವಾರ, 24 ಜೂನ್ 2024 (16:51 IST)
Photo Courtesy X
ಬೆಂಗಳೂರು: ವಿವಿಧ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ನಟ ದರ್ಶನ್ ಹಾಗೂ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಈ ಹಿಂದೆ ಒಟ್ಟಿಗೆ ನಿಂತು ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫೋಟೋದಲ್ಲಿ ನಟ ದರ್ಶನ್, ಭವಾನಿ ರೇವಣ್ಣ, ಪ್ರಜ್ವಲ್‌ ರೇವಣ್ಣ ಹಾಗೂ ಸೂರಜ್ ರೇವಣ್ಣ ಜೊತೆಯಾಗಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.  ಇನ್ನು ಈ ಫೋಟೋದಲ್ಲಿರುವ ನಾಲ್ವರು ದೊಡ್ಡ ಸಂಕಷ್ಟ ಎದುರಿಸುತ್ತಿದ್ದು, ಭವಾನಿ ರೇವಣ್ಣ ಮಾತ್ರ ಸದ್ಯದ ಮಟ್ಟಿಗೆ ಎಸ್ಕೇಪ್ ಆಗಿದ್ದಾರೆ. ಆದರೆ ಈ ಫೋಟೋ ತೆಗೆಸಿಕೊಂಡ ಗಳಿಗೆಯಿಂದಲೇ ಇವರ ಟೈಮ್ ಸರಿ ಇರ್ಲಿಲ್ಲ ಅನ್ಸುತ್ತೆ.

ಇನ್ನೂ ಈ ಫೋಟೋ ನೋಡಿದ ನೆಟ್ಟಿಗರು ವಿಧ ವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ದರ್ಶನ್ ಅವರು ಅವರು ಇವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಕ್ಕೆ ದುರದೃಷ್ಟ ಮೆಟ್ಟಿಕೊಂಡಿತು ಎಂದು ಹೇಳಿದ್ದಾನೆ.  ಇನ್ನೊಬ್ಬರು 'ಪರಪ್ಪನ ಅಗ್ರಹಾರದಿಂದ ಲೈವ್‌ʼ ಎಂದು ವಿನೋದವಾಡಿದ್ದಾರೆ.

ಫೋಟೋ ನೋಡಿದವರೆಲ್ಲ ಈ ಫೋಟೋ ತೆಗೆಸಿಕೊಂಡಿರುವ ಸ್ಥಳ ಎಲ್ಲಿ ಯಾವಾಗ ಎಂದು ತಾಳೆ ಹಾಕುತ್ತಿದ್ದಾರೆ. ಇನ್ನೂ ಮಾಹಿತಿ ಪ್ರಕಾರ ಈ ಫೋಟೋ ಲೋಕಸಭೆ ಚುನಾವಣೆಗೂ ಮುನ್ನಾ  ಹಾಸನ ಪ್ರವಾಸದಲ್ಲಿದ್ದ ವೇಳೆ ದರ್ಶನ್‌, ಎಚ್‌ಡಿ ರೇವಣ್ಣ ನಿವಾಸದಲ್ಲಿ ಇವರು ಮೂರನ್ನೂ ಭೇಟಿಯಾದ ಸಂದರ್ಭದಲ್ಲಿ ತೆಗೆಸಿಕೊಂಡಿರುವ ಫೋಟೋ ಎನ್ನಲಾಗಿದೆ.

ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸೂರಜ್ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಮೂರು ಪ್ರಕರಣಗಳು ದೇಶದಲ್ಲೇ ದೊಡ್ಡ ಸದ್ದು ಮಾಡುತ್ತಿದ್ದು, ರಾಜ್ಯ ರಾಜಕಾರಣ ಹಾಗೂ ಚಿತ್ರರಂಗಕ್ಕೆ ದೊಡ್ಡ ಕಳಂಗ ತಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB Season 12: ಹೊಸ ಆಟ ಶುರು ಮಾಡಿದ ಅಶ್ವಿನಿ ಗೌಡ ಕಾಟಕ್ಕೆ ಮನೆ ಮಂದಿ ಸುಸ್ತು

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ

ವಾರಿಜಾ ವೇಣುಗೋಪಾಲ್ ರನ್ನು ಮದುವೆಯಾದ ರಘು ದೀಕ್ಷಿತ್: ಯಾರೆಲ್ಲಾ ಬಂದಿದ್ರು ನೋಡಿ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸೂಸೈಡ್‌ ಕೇಸ್‌: ನಟಿ ರಿಯಾ ಚಕ್ರವರ್ತಿಗೆ ಸಿಬಿಐ ಕ್ಲೀನ್‌ಚಿಟ್

ಮುಂದಿನ ಸುದ್ದಿ