Publish Date: Tue, 07 Apr 2020 (09:24 IST)
Updated Date: Tue, 07 Apr 2020 (09:25 IST)
ಬೆಂಗಳೂರು: ಒಂದು ಕಾಲದಲ್ಲಿ ಕುಚಿಕು ಗೆಳೆಯರಂತಿದ್ದ ಬುಲೆಟ್ ಪ್ರಕಾಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವುದೋ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ದೂರವಾಗಿದ್ದರು.
ಆದರೆ ತನ್ನ ಗೆಳೆಯನ ಸಾವಿನ ಸುದ್ದಿ ತಿಳಿದು ನಟ ದರ್ಶನ್ ಮರುಗಿದ್ದು ಹಿಂದಿನ ಕಹಿ ಘಟನೆಗಳನ್ನು ಮರೆತು ಅವರ ಕುಟುಂಬಕ್ಕೆ ಸಾಂತ್ವ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿ ಸಂದೇಶ ಬರೆದಿದ್ದಲ್ಲದೆ, ಅವರ ಕುಟುಂಬಕ್ಕೂ ಮುಂದಿನ ದಿನಗಳಲ್ಲಿ ನೆರವಾಗುವುದಾಗಿ ಹೇಳಿಕೊಂಡಿದ್ದಾರೆ.