Publish Date: Mon, 06 Apr 2020 (17:01 IST)
Updated Date: Mon, 06 Apr 2020 (17:03 IST)
ಬೆಂಗಳೂರು: ಕೊರೋನಾ ಮಹಾಮಾರಿಯ ನಡುವೆ ಸ್ಯಾಂಡಲ್ ವುಡ್ ಗೆ ಬರಸಿಡಿಲೊಂದು ಎರಗಿದ್ದು ಖ್ಯಾತ ಹಾಸ್ಯ ನಟ ಬುಲ್ಲೆಟ್ ಪ್ರಕಾಶ್ ಇನ್ನಿಲ್ಲವಾಗಿದ್ದಾರೆ.
ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಲ್ಲೆಟ್ ಪ್ರಕಾಶ್ ಇಂದು ವಿಧಿವಶರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು.