ರವಿಚಂದ್ರನ್ ಪುತ್ರ ಮನೋರಂಜನ್ ಆರಂಭ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವಾಗಿದ್ದು ಹೀಗೆ!

ಭಾನುವಾರ, 18 ಆಗಸ್ಟ್ 2019 (09:18 IST)
ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರ ಮಕ್ಕಳೂ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವುದು ಹೊಸತೇನಲ್ಲ. ರವಿಚಂದ್ರನ್ ಪುತ್ರ ಮನೋರಂಜನ್ ಈಗಾಗಲೇ ಸಿನಿಮಾ ರಂಗಕ್ಕೆ ಪರಿಚಯವಾಗಿದ್ದಾರೆ.


ಅವರೀಗ ಆರಂಭ ಎನ್ನುವ ಹೊಸ ಸಿನಿಮಾದಲ್ಲಿ ಅಭಿನಯಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ಟೀಸರ್ ಆಗಸ್ಟ್ 23 ಕ್ಕೆ ರಿಲೀಸ್ ಆಗಲಿದ್ದು, ಇದರಲ್ಲೊಂದು ಟ್ವಿಸ್ಟ್ ಇರಲಿದೆ.

ಈ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದಾರೆ. ಆ ಮೂಲಕ ಕ್ರೇಜಿಸ್ಟಾರ್ ಪುತ್ರನ ಸಿನಿಮಾಗೆ ಹೆಚ್ಚು ಪ್ರಚಾರ ಸಿಗುವಂತೆ ಚಾಲೆಂಜಿಂಗ್ ಸ್ಟಾರ್ ನೆರವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಿಂದಿಯಲ್ಲಿ ಕನ್ನಡ ನಟ ಜೆಕೆ ರಾವಣನ ಅವತಾರ ಶುರು