ದರ್ಶನ್ ಗೆ ಜೈಲಲ್ಲಿ ಕಾಡುತ್ತಿದೆ ಆ ಒಂದು ಸಮಸ್ಯೆ

Krishnaveni K
ಗುರುವಾರ, 3 ಅಕ್ಟೋಬರ್ 2024 (14:30 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಜೈಲಿನಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ತಿಳಿದುಬಂದಿದೆ. ಅವರ ಬೆನ್ನುನೋವು ಉಲ್ಬಣವಾಗಿದೆ ಎನ್ನಲಾಗಿದೆ.

ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಈಗಾಗಲೇ ತಮಗೆ ಬೆನ್ನು ನೋವಿದೆ. ಈ ಕಾರಣಕ್ಕೆ ಸರ್ಜಿಕಲ್ ಚೇರ್ ಕೊಡಿ ಎಂದು ಮನವಿ ಮಾಡಿದ್ದರು. ವೈದ್ಯಕೀಯ ವರದಿ ಪ್ರಕಾರ ಅವರಿಗೆ ಸರ್ಜಿಕಲ್ ಚೇರ್ ಕೊಡಲಾಗಿತ್ತು. ಇದಾದ ಬಳಿಕ ಅವರು ಹಾಸಿಗೆ, ಚೇರ್ ಗೂ ಮನವಿ ಮಡಿದ್ದರು.

ಇದರ ನಡುವೆ ಅವರ ಬೆನ್ನು ನೋವಿನ ಸಮಸ್ಯೆ ಪದೇ ಪದೇ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ. ಬೆನ್ನು ನೋವಿಗೆ ವಿಮ್ಸ್ ಆಸ್ಪತ್ರೆಯ ವೈದ್ಯರನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ಬೆನ್ನಿನ ಹಿಂಭಾಗದಲ್ಲಿ ಊತ ಕಂಡುಬಂದಿದೆ. ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿರುವುದಾಗಿ ತಿಳಿದುಬಂದಿದೆ.

ಸ್ಕ್ಯಾನಿಂಗ್ ಮಾಡಿಸಲು ದರ್ಶನ್ ನಿರಾಕರಿಸಿದ್ದು ಸದ್ಯಕ್ಕೆ ಅವರಿಗೆ ನೋವು ನಿವಾರಕ ಗುಳಿಗೆ ನೀಡಲಾಗಿದೆ. ದರ್ಶನ್ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಳೆ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಬಿಡುಗಡೆಯ ನಿರೀಕ್ಷೆಯಲ್ಲಿರುವ ದರ್ಶನ್ ಈ ಕಾರಣಕ್ಕೇ ಜೈಲಿನಲ್ಲಿ ಹೆಚ್ಚಿನ ತಪಾಸಣೆಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿಟ್ಲರ್ ಸೀರಿಯಲ್‌ನಲ್ಲಿ ದಿಲೀಪ್ ರಾಜ್‌ಗೆ ನಾಯಕಿಯಾಗಿದ್ದ ಮಲೈಕಾ ಭಾವುಕಾ ಪೋಸ್ಟ್‌

ಸೂರಜ್ ನಂಬಿಯಾರ್ ಜತೆಗಿನ ವಿಚ್ಛೇಧನ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಮೌನಿ ರಾಯ್

ತ್ರಿಶಾ ಕೃಷ್ಣನ್‌ ಮುಂದಿನ ಸಿನಿಮಾ ಕರುಪ್ಪು ವಿಶೇಷ ಪ್ರದರ್ಶನಕ್ಕೆ ಸಿಎಂ ವಿಜಯ್‌ರಿಂದ ಸಿಕ್ತು ಅನುಮತಿ

ದಿಲೀಪ್ ರಾಜ್ ಸಾವಿಗೆ ಮುನ್ನ ನಡೆದಿದ್ದ ವಿಚಾರ ಬಯಲು

ಯಾರೂ ನನ್ನ ಕಡೆ ತಿರುಗಿಯೂ ನೋಡಲಿಲ್ಲ, ರವಿಶಂಕರ್ ಗುರೂಜಿ ಆಶ್ರಮದ ಶಾಕಿಂಗ್ ಘಟನೆ ನೆನೆದ ರಜನಿಕಾಂತ್ Video

ಮುಂದಿನ ಸುದ್ದಿ
Show comments