ಮಧ್ಯ ಬೆರಳು ತೋರಿದ್ಯಾಕೆ ಎಂದು ಪೊಲೀಸರ ಡ್ರಿಲ್: ದರ್ಶನ್ ಹೇಳಿದ್ದೇನು

Krishnaveni K
ಶುಕ್ರವಾರ, 13 ಸೆಪ್ಟಂಬರ್ 2024 (11:16 IST)
ಬಳ್ಳಾರಿ: ನಿನ್ನೆ ಮಾಧ್ಯಮಗಳ ಕ್ಯಾಮರಾ ಕಂಡೊಡನೆ ಮಧ್ಯ ಬೆರಳು ತೋರಿ ಅಸಭ್ಯ ವರ್ತನೆ ತೋರಿದ್ದ ದರ್ಶನ್ ಗೆ ಪೊಲೀಸರು ನಿನ್ನೆಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ದರ್ಶನ್ ಪ್ರತಿಕ್ರಿಯೆ ಏನಿತ್ತು ಎಂಬುದು ಈಗ ಬಹಿರಂಗವಾಗಿದೆ.

ನಟ ದರ್ಶನ್ ಗೆ ಮೊದಲಿನಿಂದಲೂ ಮಾಧ್ಯಮಗಳ ಮೇಲೆ ಸಿಟ್ಟಿದೆ. ಇದೀಗ ತಮ್ಮ ವಿರುದ್ಧ ಕೇಸ್ ವಿಚಾರವಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ಅವರನ್ನು ಮತ್ತಷ್ಟು ತಲೆಕೆಡಿಸಿದೆ. ಇದೇ ಹತಾಶೆಯಿಂದಲೇ ನಿನ್ನೆ ಬಳ್ಳಾರಿ ಜೈಲಿನಲ್ಲಿ ವಕೀಲರ ಭೇಟಿಗೆ ವಿಸಿಟರ್ಸ್ ರೂಂಗೆ ಬರುವಾಗ ಮಾಧ್ಯಮಗಳ ಕ್ಯಾಮರಾ ಕಂಡೊಡನೆ ದರ್ಶನ್ ಅಸಭ್ಯ ಸನ್ನೆ ಮಾಡಿದ್ದಾರೆ.

ಅವರ ವಿಡಿಯೋಗಳು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು. ಹಲವರು ಕೆಟ್ಟ ಮೇಲೂ ಬುದ್ಧಿ ಬಂದಿಲ್ಲ ಎಂದು ದರ್ಶನ್ ರನ್ನು ಟೀಕೆ ಮಾಡಿದ್ದರು. ಇನ್ನು ಅವರ ಅಭಿಮಾನಿಗಳಂತೂ ಎಂದಿನಂತೇ ತಮ್ಮ ಬಾಸ್ ಮೀಡಿಯಾಗೆ ಸರಿಯಾಗಿಯೇ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.

ಆದರೆ ಈ ವಿಚಾರ ವಿವಾದವಾಗುತ್ತಿದ್ದಂತೇ ನಿನ್ನೆ ಜೈಲಿನಲ್ಲಿ ಪೊಲೀಸರು ದರ್ಶನ್ ರನ್ನು ವಿಚಾರಣೆ ಮಾಡಿದ್ದಾರೆ. ಈ ಸನ್ನೆ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ದರ್ಶನ್, ನಾನು ಹಾಗೆ ಮಾಡಿಯೇ ಇಲ್ಲ. ಎಲ್ಲದಕ್ಕೂ ನೀವು ಯಾಕೆ ನನ್ನನ್ನು ತಪ್ಪು ತಿಳಿಯುತ್ತೀರಿ. ಅಷ್ಟಕ್ಕೂ ಮಾಧ್ಯಮಗಳು ಯಾಕೆ ಯಾವಾಗಲೂ ಜೈಲಿನ ಬಳಿ ಇರ್ತಾರೆ ಎಂದು ಪ್ರಶ್ನೆ ಮಾಡಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಸುದೀಪ್ ಮಗಳಿಗೆ ಗುಟ್ಟಾಗಿ ಮದೆಯಾಯಿತಾ, ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು

ದರ್ಶನ್‌ಗೆ ಬಿಗ್‌ ಶಾಕ್, ಮನೆಯಲ್ಲಿ ಪತ್ತೆಯಾಗಿದ್ದ ₹82 ಲಕ್ಷ ಹಣ ಸದ್ಯ ಕೊಡಕ್ಕಾಗಲ್ಲ ಎಂದ ಕೋರ್ಟ್‌

ಮುಂದಿನ ಸುದ್ದಿ
Show comments