Webdunia - Bharat's app for daily news and videos

Install App

ನಿನ್ನೆ ಜೋಡೆತ್ತು ಫೋಟೋ, ಇಂದು ‘ಏಕಾಂಗಿ’ ಸಂದೇಶ ಬರೆದ ನಟ ದರ್ಶನ್

Webdunia
ಮಂಗಳವಾರ, 29 ಆಗಸ್ಟ್ 2023 (09:31 IST)
Photo Courtesy: Twitter
ಬೆಂಗಳೂರು: ಮಾಧ್ಯಮಗಳೊಂದಿಗೆ ಮುನಿಸಿಗೆ ತೆರೆ ಎಳೆದು, ಸುಮಲತಾ ಅಂಬರೀಶ್ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ಮೇಲೆ ನಟ ದರ್ಶನ್ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ.

ಸುಮಲತಾ ಪಾರ್ಟಿಯಲ್ಲಿ ಭಾಗವಹಿಸಿದ ತಕ್ಷಣವೇ ದರ್ಶನ್ ಜೋಡೆತ್ತುಗಳೊಂದಿಗಿನ ಫೋಟೋ ಪ್ರಕಟಿಸಿ, ಕಾಲಾಯ ತಸ್ಮೈ ನಮಃ ಎಂಬ ಸಂದೇಶ ಬರೆದಿದ್ದರು. ಈ ಮೂಲಕ ಕಿಚ್ಚನ ಜೊತೆಗಿನ ಮುನಿಸು ಮರೆತಿರುವುದನ್ನು ಪರೋಕ್ಷವಾಗಿ ಸುಳಿವು ನೀಡಿದ್ದಾರೆ ಎಂದು ಎಲ್ಲರೂ ಅಂದುಕೊಳ್ಳುವಷ್ಟರಲ್ಲಿ ಮತ್ತೊಂದು ‘ಏಕಾಂಗಿ’ ಸಂದೇಶ ಬರೆದು ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದಾರೆ.

ಏಕಾಂಗಿ ಸಿನಿಮಾದ ಬಿ ಅಲೋನ್, ಟು ಬಿ ಹ್ಯಾಪಿ, ಬಿ ಹ್ಯಾಪಿ ಟು ಬಿ ಅಲೋನ್ ಎಂದು ಬರೆದು ವಿತ್ ಮೈ ಸೆಲೆಬ್ರಿಟಿಸ್ ಎಂದು ಸಂದೇಶ ಬರೆದಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಸ್ ಎಂದು ಕರೆಯುತ್ತಾರೆ. ಇತ್ತೀಚೆಗೆ ದರ್ಶನ್ ಮಾಧ‍್ಯಮಗಳಿಗೆ ಬಹಿರಂಗವಾಗಿ ಕ್ಷಮೆ ಯಾಚಿಸಿ ಸಂದೇಶ ಬರೆದಿದ್ದು ಅವರ ಕೆಲವು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ನೀವು ಯಾರ ಮುಂದೆಯೂ ಕೈ ಮುಗಿಯಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಬಹುಶಃ ತಾವು ಪ್ರೀತಿಸುವ ಅಭಿಮಾನಿಗಳಿಗೆ ದರ್ಶನ್ ಈ ಸಂದೇಶ ಬರೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ರಾಜಕೀಯ ಭವಿಷ್ಯದಲ್ಲಿ ಹೊಸ ಮೈಲಿಗಲ್ಲಿನ ಹೆಜ್ಜೆಯಿಟ್ಟ ನಟ ಕಮಲ್ ಹಾಸನ್‌‌‌

ಪಾದ ಪೂಜೆ ನೆರವೇರಿಸಿ, ನನ್ನ ಗಂಡ ಮಿಲಿಯನ್‌ಗೊಬ್ಬ ಎಂದ ಸೋನಲ್, ನಟಿಗೆ ಸಂಪ್ರದಾಯದ ಮೇಲಿನ ಗೌರವಕ್ಕೆ ಫ್ಯಾನ್ಸ್‌ ಫಿದಾ

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಮುಂದಿನ ಸುದ್ದಿ
Show comments