Publish Date: Tue, 14 Jul 2020 (09:19 IST)
Updated Date: Tue, 14 Jul 2020 (09:21 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗೆ ಹಲವು ವರ್ಷಗಳಿಂದ ಮ್ಯಾಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಡಿ ಬಾಸ್ ಗೆ ಸುಮಾರು ಎರಡು ದಶಕಗಳಿಂದ ಇವರು ಜತೆಯಾಗಿದ್ದರು ಎನ್ನಲಾಗಿದೆ. ತಮ್ಮ ಸುತ್ತುಮುತ್ತಲಿರುವವರನ್ನು ತಮ್ಮ ಕುಟುಂಬದವರೆಂದೇ ಪರಿಗಣಿಸುವ ದರ್ಶನ್ ಗೆ ಶ್ರೀನಿವಾಸ್ ಅಗಲುವಿಕೆ ತೀವ್ರ ದುಃಖ ತಂದಿದೆ.