Select Your Language

Notifications

webdunia
webdunia
webdunia
webdunia

ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ

Darling Krishna-Milana Nagaraj

Krishnaveni K

ಬೆಂಗಳೂರು , ಶುಕ್ರವಾರ, 8 ಮಾರ್ಚ್ 2024 (12:27 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಿಲನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ತೆರೆ ಮೇಲೆ ಯಶಸ್ವೀ ಜೋಡಿಯಾಗಿದ್ದ ಕೃಷ್ಣ-ಮಿಲನಾ ಬಹುಕಾಲ ಪ್ರೇಮಿಗಳಾಗಿದ್ದು ಕೊನೆಗೆ 2021 ರ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದೇ ಮದುವೆಯಾಗಿದ್ದರು. ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ‘ಬೇಬಿ ಕ್ರಿಶ್ಮಿ ಸೆಪ್ಟೆಂಬರ್ ಬರಲಿದೆ’ ಎಂದು ಮಿಲನಾ ಮಗುವಿನ ಟೀ ಶರ್ಟ್ ಫೋಟೋ ಬಳಸಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮಿಲನಾ ನಾಯಕಿಯಾಗಿ, ಪೃಥ್ವಿ ಅಂಬರ್ ನಾಯಕರಾಗಿ ನಟಿಸಿದ್ದ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಬಿಡುಗಡೆಯಾಗಿತ್ತು. ಸದ್ಯಕ್ಕೆ ಮಿಲನಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಜೊತೆಗೆ ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪರ ಆಡಲು ದುಬೈಗೆ ತೆರಳಿದಾಗ ಮಿಲನಾ ಜೊತೆಗಿರಲಿಲ್ಲ. ಇದು ಅನೇಕರಿಗೆ ಅನುಮಾನ ಹುಟ್ಟಿಸಿತ್ತು.

ಸಾಮಾನ್ಯವಾಗಿ ಡಾರ್ಲಿಂಗ್ ಕೃಷ್ಣ-ಮಿಲನಾ ಎಲ್ಲೇ ಹೋದರೂ ಜೊತೆಯಾಗಿಯೇ ಇರುತ್ತಾರೆ. ಆದರೆ ಈ ಬಾರಿ ಮಿಲನಾ ಅಷ್ಟಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೆ ಈಗ ಉತ್ತರ ಸಿಕ್ಕಿದೆ. ಸದ್ಯಕ್ಕೆ ಮಿಲನಾ ಎರಡು ತಿಂಗಳ ಗರ್ಭಿಣಿಯಾಗಿದ್ದು ಸೆಪ್ಟೆಂಬರ್ ನಲ್ಲಿ ಮಗುವಿನ ಆಗಮನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಫೀ ತೆಗೆದುಕೊಂಡ ಅಭಿಮಾನಿ ಮೇಲೆ ಸಿಟ್ಟಿಗೆದ್ದ ಸಲ್ಮಾನ್ ಖಾನ್