ಮತದಾನಕ್ಕೆ ಸಿನಿಮಾ ಶೂಟಿಂಗ್‌ನಿಂದ ಬ್ರೇಕ್ ಪಡೆದು ರಷ್ಯಾದಿಂದ ಹೊರಟ ದಳಪತಿ ವಿಜಯ್

Sampriya
ಗುರುವಾರ, 18 ಏಪ್ರಿಲ್ 2024 (15:38 IST)
Photo Courtesy Facebook
ತಮಿಳುನಾಡು: ನಟ ದಳಪತಿ ವಿಜಯ್ ಅವರು ತಮ್ಮ ಮುಂಬರು  ಬಹುನಿರೀಕ್ಷಿತ 'ಗೋಟ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿಬರುತ್ತಿರುವ ವೈಜ್ಞಾನಿಕ ಆಕ್ಷನ್ ಥ್ರಿಲ್ಲರ್ ಗೋಟ್ ಕಳೆದ ವರ್ಷ ಶುರುವಾಗಿದ್ದು, ಈಗಾಗಲೇ ಶೇ 80ರಷ್ಟು ಚಿತ್ರದ ಶೂಟಿಂಗ್ ಪೂರ್ಣ ಗೊಂಡಿದೆ. ಪ್ರಸ್ತುತ ನಾಯಕ ನಟ ವಿಜಯ್ ಸೇರಿದಂತೆ ಚಿತ್ರತಂಡ ರಷ್ಯಾದಲ್ಲಿ ಪ್ರಮುಖ ದೃಶ್ಯದ ದೃಶ್ಯದ ಚಿತ್ರೀಕರಣದಲ್ಲಿದ್ದಾರೆ.

ಅಲ್ಲಿ ಚೇಸ್ ಸೀಕ್ವೆನ್ಸ್‌ನ ವಿಜಯ್ ಅವರ ಶೂಟಿಂಗ್ ಬಹತೇಕ ಮುಕ್ತಾಯಗೊಂಡಿದೆ ಎಂಬ ಸುದ್ದಿ ಇದೆ. ಇನ್ನೂ ವರದಿಗಳ ಪ್ರಕಾರ ನಾಳೆ ತಮಿಳುನಾಡಿನಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ನಟ ಇಂದು ರಾತ್ರಿ ರಷ್ಯಾದಿಂದ ತಮಿಳುನಾಡಿಗೆ ಮರಳಲಿದ್ದಾರೆ ಎಂಬ ಸುದ್ದಿಯಿದೆ.

'ಗೋಟ್' ಚಿತ್ರೀಕರಣದ ನಂತರ, ವಿಜಯ್ ತಮ್ಮ ಪಕ್ಷದ ಸದಸ್ಯರೊಂದಿಗೆ ರಾಜಕೀಯ ಸಭೆ ನಡೆಸಲಿದ್ದಾರೆ. ನಟನ ರಾಜಕೀಯ ಪಕ್ಷ, 'ತಮಿಳಗ ವೆಟ್ರಿ ಕಳಗಂ', ಅವರ ನಾಯಕತ್ವದಲ್ಲಿ 2026 ರ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ವೆಂಕಟ್ ಪ್ರಭು ನಿರ್ದೇಶನದ, 'ಗೋಟ್' ಸೆಪ್ಟೆಂಬರ್ 5, 2024 ರಂದು ತೆರೆಗೆ ಬರಲಿದೆ. ಚಿತ್ರದ ಟೀಸರ್ ಜೂನ್ 22 ರಂದು ನಟನ ಜನ್ಮದಿನದಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತದೆ.

ಚಿತ್ರದಲ್ಲಿ ವಿಜಯ್, ಮೀನಾಕ್ಷಿ ಚೌಧರಿ, ಪ್ರಶಾಂತ್, ಅಜ್ಮಲ್, ಪ್ರಭುದೇವ, ಲೈಲಾ, ಸ್ನೇಹಾ, ಜಯರಾಮ್, ಪಾರ್ವತಿ ನಾಯರ್, ವಿಟಿವಿ ಗಣೇಶ್, ಪ್ರೇಮ್ಜಿ ಮತ್ತು ವೈಭವ್ ಮುಂತಾದವರು ನಟಿಸಿದ್ದಾರೆ. ಇದಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಮಿಡಿ ಕಿಲಾಡಿಗಳು ಪ್ರೋಮೋ ನೋಡಿದ ನೆಟ್ಟಿಗರು ಗರಂ ಆಗಿದ್ಯಾಕೆ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments