ರಕ್ಷತ್ ಶೆಟ್ಟಿ ಹೆಸರು ಕೆಡಿಸುವ ಯತ್ನ ನಡೆಯುತ್ತಿದೆ!

Krishnaveni K
ಗುರುವಾರ, 1 ಫೆಬ್ರವರಿ 2024 (14:37 IST)
Photo Courtesy: Twitter
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚೆಗೆ ತಮ್ಮ ತವರಿನ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ದೈವ ಅಭಯ ನೀಡಿದೆ.

ರಕ್ಷಿತ್ ಆಗಾಗ ಮಂಗಳೂರಿನಲ್ಲಿರುವ ತಮ್ಮ ಮನೆಗೆ ಭೇಟಿ ನೀಡುತ್ತಿರುತ್ತಾರೆ. ದೈವ ಕೋಲದ ಬಗ್ಗೆ ಅಪಾರ ಭಕ್ತಿಯಿರುವ ರಕ್ಷಿತ್ ಇತ್ತೀಚೆಗೆ ಬಬ್ಬು ಸ್ವಾಮಿ ಕೋಲದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದರು. ಕರಾವಳಿ ಭಾಗದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ರಕ್ಷಿತ್ ಗೆ ಈಗಲೂ ಮೊದಲಿನಷ್ಟೇ ಗೌರವವಿದೆ ಎಂಬುದಕ್ಕೆ ಇದೇ ಸಾಕ್ಷಿ.  ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118 ನೇ ನೇಮೋತ್ಸವದಲ್ಲಿ ಪಾಲ್ಗೊಂಡು ರಕ್ಷಿತ್ ಪೂಜೆ ನೆರವೇರಿಸಿದರು. ಜೊತೆಗೆ ತಮ್ಮ ಮುಂದಿನ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ದೈವದ ಮುಂದೆ ಬೇಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ದೈವ ಅಭಯ ನೀಡಿದೆ.

ರಕ್ಷಿತ್ ಗೆ ದೈವ ನೀಡಿದ ಅಭಯವೇನು?
ನಿನ್ನ ಕೆಲಸ ಕಾರ್ಯಗಳಲ್ಲಿ ಧೈರ್ಯವಾಗಿ ಮುಂದೆ ಹೋಗು. ನಾನು ನಿನ್ನ ಜೊತೆಗಿದ್ದೆನೆ. ಯಾವುದೇ ವಿಘ್ನಗಳಾಗದಂತೆ ನೋಡಿಕೊಳ್ಳುತ್ತೇನೆ. ನಿನ್ನ ಹೆಸರು ಹಾಳು ಮಾಡಲು ಕೆಲವರು ಸಂಚು ಮಾಡುತ್ತಿದ್ದಾರೆ. ಅದು ನನಗೂ ಗೊತ್ತಾಗಿದೆ. ಅಂತಹ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿಟ್ಟು ನಿನ್ನ ಯೋಜನೆಗಳಿಗೆ ನಿನ್ನ ಬೆನ್ನುಲುಬಾಗಿ ನಿಲ್ಲುತ್ತೇನೆ’ ಎಂದು ರಕ್ಷಿತ್ ಗೆ ದೈವ ಧೈರ್ಯ ನೀಡಿದೆ.

ಇತ್ತೀಚೆಗಷ್ಟೇ ನಟ ರಕ್ಷಿತ್ ಶೆಟ್ಟಿ ‘ರಿಚರ್ಡ್ ಆಂಟನಿ’ ಸಿನಿಮಾ ನಿರ್ಮಾಣದಿಂದ ಹೊಂಬಾಳೆ ಫಿಲಂಸ್ ಹಿಂದೆ ಸರಿದಿತ್ತು ಎಂಬ ಸುದ್ದಿಯಿದೆ. ಕೆಲವರು ಕರಾವಳಿ ನಟರು ತಮ್ಮವರನ್ನು ಮಾತ್ರ ಬೆಳೆಸುತ್ತಾರೆ ಎಂದು ಆಪಾದಿಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ದೈವ ಈ ರೀತಿ ಎಚ್ಚರಿಕೆ ಕೊಟ್ಟಿದ್ದು ವಿಶೇಷ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೇವರ ಮಕ್ಕಳಿಗೆ ದೀಪಾವಳಿಗೆ ಸರ್ಪ್ರೈಸ್ ನೀಡಿದ ಸಮಂತಾ ರುತ್ ಪ್ರಭು

ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ: ದೀಪಾವಳಿ ದಿನ ಗುಡ್‌ನ್ಯೂಸ್ ಹಂಚಿಕೊಂಡ ರಶ್ಮಿ ಪ್ರಭಾಕರ್

ಕಾಂತಾರ ಸಕ್ಸನ್‌ ಬೆನ್ನಲ್ಲೇ ಬಿಹಾರದ ಪವರ್‌ಫುಲ್‌ ದೇಗುಲಕ್ಕೆ ಡಿವೈನ್‌ ಸ್ಟಾರ್‌ ರಿಷಭ್‌ ಶೆಟ್ಟಿ ಭೇಟಿ

ಮೊದಲ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಎಂಟ್ರಿ ಕೊಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

ಮುಂದಿನ ಸುದ್ದಿ
Show comments