Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ ಲಿಂಗಾಯತರಾಗಿದ್ದು ಮಾಂಸ ಸೇವಿಸಿದ್ದು ತಪ್ಪಾ

Daali Dhananjaya
Photo Credit: Social media
ಬೆಂಗಳೂರು: ನಟ ಡಾಲಿ ಧನಂಜಯ ಲಿಂಗಾಯತ ಪಂಗಡಕ್ಕೆ ಸೇರಿದ್ದರೂ ಮಾಂಸ ಸೇವನೆ ಮಾಡಿದ್ದು ತಪ್ಪಾ? ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗಳಾಗುತ್ತಿವೆ.

ಇತ್ತೀಚೆಗೆ ಯಾವುದೋ ರೆಸ್ಟೋರೆಂಟ್ ನಲ್ಲಿ ಡಾಲಿ ಧನಂಜಯ ತಮ್ಮ ಸಂಗಡಿಗರೊಂದಿಗೆ ಕೂತು ಮಟನ್ ಬಿರಿಯಾನಿ ಸೇವಿಸುತ್ತಿರುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಡಾಲಿ ಧನಂಜಯ ಲಿಂಗಾಯತ ಪಂಗಡಕ್ಕೆ ಸೇರಿದವರು. ಲಿಂಗ ಪೂಜೆ ಮಾಡುವವರು ಮಾಂಸಾಹಾರ ಸೇವನೆ ಮಾಡಲ್ಲ. ಆದರೆ ಡಾಲಿ ಮಾಂಸಾಹಾರ ಸೇವಿಸಿ ತಮ್ಮ ಪಂಗಡದ ಆಚರಣೆಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇದಕ್ಕೀಗ ಡಾಲಿ ಧನಂಜಯ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಆಹಾರ ನಮ್ಮ ಹಕ್ಕು ಎಂದು ಅಭಿಯಾನವನ್ನೇ ಮಾಡಿ ಡಾಲಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ಆಹಾರ ಅವರ ಆಯ್ಕೆ. ಮಾಂಸಾಹಾರ ಸೇವನೆ ಮಾಡುವುದು ಅಪರಾಧವಲ್ಲ. ಇಂತಹದ್ದೊಂದು ಅಪಪ್ರಚಾರ ಮಾಡುವ ಮೂಲಕ ಪಂಗಡವನ್ನೇ ಡಾಲಿ ವಿರುದ್ಧ ಎತ್ತಿಕಟ್ಟಲು ಹುನ್ನಾರ ನಡೆಸಲಾಗುತ್ತಿದೆ ಎಂದು ಅವರ ಪರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಣಾಂತರಗಳಿಂದ ವಿಳಂಬವಾಗಿದ್ದ ಉಪೇಂದ್ರ, ರಮ್ಯಾ ನಟನೆಯ ರಕ್ತ ಕಾಶ್ಮೀರ ಬಿಡುಗಡೆಗೆ ಮುಹೂರ್ತ ಫಿಕ್ಸ್‌