Publish Date: Mon, 12 Oct 2020 (17:37 IST)
Updated Date: Mon, 12 Oct 2020 (17:39 IST)
ಕ್ರಿಕೆಟರ್ ಎಂ.ಎಸ್. ಧೋನಿಯ ಮಗಳಿಗೆ ಬೆದರಿಕೆ ಹಾಕಿದವರ ವಿರುದ್ಧ ಬಾಲಿವುಡ್ ನಟರು ಕಿಡಿಕಾರಿದ್ದಾರೆ.
ಧೋನಿ ಪುತ್ರಿ ಜೀವಾಗೆ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಿದ ಹದಿಹರೆಯದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ನಟ ಆರ್. ಮಾಧವನ್ ಒತ್ತಾಯಿಸಿದ್ದಾರೆ. ಬೆದರಿಕೆ ಹಾಕಿದವರನ್ನು “ಮುಖರಹಿತ ರಾಕ್ಷಸರು” ಎಂದು ಕರೆದಿದ್ದಾರೆ.
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿ ಜೀವಾ ಅವರನ್ನು ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಿದ ಹದಿಹರೆಯದವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, 16 ವರ್ಷದ ಅಪರಾಧಿಯನ್ನು ಗುಜರಾತ್‌ನ ಮುಂಡ್ರಾದಿಂದ ಬಂಧಿಸಲಾಗಿದೆ.