Daily Horoscope
✕

ಕೊರೋನಾ ಹಾಡು ಬಿಡುಗಡೆ ದಿಡೀರ್ ಮುಂದೂಡಿಕೆ: ಅಭಿಮಾನಿಗಳಿಗೆ ನಿರಾಸೆ

Webdunia
ಮಂಗಳವಾರ, 26 ಮೇ 2020 (09:29 IST)
ಬೆಂಗಳೂರು: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಒಂದೇ ಹಾಡಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಕೊರೋನಾ ಕುರಿತ ಜಾಗೃತಿ ಮೂಡಿಸುವ ಹಾಡಿನ ಬಿಡುಗಡೆ ನಿನ್ನೆಯೇ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಕೊನೆಯ ಕ್ಷಣಗಳಲ್ಲಿ ಮುಂದೂಡಿಕೆಯಾಗಿದೆ.


ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುಪಡಿಸಿದ ಕೊರೋನಾ ಕುರಿತ ‘ಬದಲಾಗು ನೀನು’ ಎಂಬ ಹಾಡು ನಿನ್ನೆ ಸಂಜೆ 5 ಗಂಟೆಗೆ ಯೂ ಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗುವುದೆಂದು ನಿಗದಿಯಾಗಿತ್ತು. ಅದರಂತೆ ಎಲ್ಲಾ ಸೆಲೆಬ್ರಿಟಿಗಳನ್ನು ಒಟ್ಟಿಗೇ ನೋಡಲು ಅಭಿಮಾನಿಗಳೂ ಕಾತುರದಿಂದ ಕಾಯುತ್ತಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಸಚಿವ ಡಾ. ಕೆ ಸುಧಾಕರ್ ಸಲಹೆಯಂತೆ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಡಿ ಬೀಟ್ಸ್ ಟ್ವೀಟ್ ಮಾಡಿದೆ. ಮುಂದಿನ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸುವುದಾಗಿ ಪ್ರಕಟಿಸಿದೆ. ಆದರೆ ಹಾಡಿಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳು ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ಲ: ಸ್ಪೋಟಕ ಅಡಿಯೋ ವೈರಲ್

ಕೊಟ್ಟ ಕಾರು ನೀಡಿಲ್ಲ, ಹಣ ವಂಚನೆ.. ಬಣ್ಣ ಕಳಚುತ್ತದೆ ಎಂದಿದ್ದ ಧನ್ವೀರ್ ವಿರುದ್ಧವೇ ಈಗ ಸಾಲು ಸಾಲು ಆರೋಪಗಳು

ಅತ್ತಿಗೆ ಮೈದುನರಂತಿದ್ದ ಧನ್ವೀರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕಿತ್ತಾಟಕ್ಕೆ ಅಸಲಿ ಕಾರಣವೇನು

ಸಕ್ಸಸ್ ಅಂದ್ರೆ ಹೀಗಿರ್ಬೇಕು…ಪ್ರೇಮದ ಊರಲಿ ಸಿನಿಮಾ 100 ಕೋಟಿ ಕ್ಲಬ್ ಗೆ ಸೇರ್ಪಡೆ

BBK13: ಗೆಳೆಯ ಎನ್ನುತ್ತಲೇ ತಾಂಡವ್ ಬೆನ್ನಿಗೆ ಚೂರಿ ಹಾಕಿದ್ರಾ ಗಗನ್… ಕಣ್ಣೀರಾದ ಕುಚಿಕು

ಮುಂದಿನ ಸುದ್ದಿ
Show comments