Webdunia - Bharat's app for daily news and videos

Install App

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು

Sampriya
ಬುಧವಾರ, 18 ಜೂನ್ 2025 (16:35 IST)
Photo Credit X
ಬೆಂಗಳೂರು: ಉಪ್ಪಿ ರುಪ್ಪಿ  ಸಿನಿಮಾಕ್ಕಾಗಿ ನೀಡಿದ ಮುಂಗಡ ಹಣ ವಾಪಸ್‌ ಕೊಡದ ಆರೋಪದಲ್ಲಿ ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ನಲ್ಲಿ ಮತ್ತೊಂದು ದೂರು ದಾಖಲಾಗಿದೆ.

ನಟಿ ರಚಿತಾ ರಾಮ್ ವಿರುದ್ಧ ಸಂಜು ವೆಡ್ಸ್ ಗೀತಾ-2 ಚಿತ್ರತಂಡ ತಿರುಗಿ ಬಿದ್ದಿರುವ ಬೆನ್ನಲ್ಲೇ ಇದೀಗ ನಟಿಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.

ಸ್ಯಾಂಡಲ್‌ವುಡ್‌ನ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ಅವರಿಗೆ ಉಪ್ಪಿ ರುಪ್ಪಿ  ಸಿನಿಮಾಕ್ಕಾಗಿ  ಅಡ್ವಾನ್ಸ್‌ ನೀಡಲಾಗಿತ್ತು. ಈಗ ಹಣ ವಾಪಸ್‌ ಕೊಡದೇ ನಿರ್ಮಾಪಕಿಯನ್ನು ಸತಾಯಿಸುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. 

8 ವರ್ಷಗಳ ಹಿಂದೆ ಉಪ್ಪಿ ಮತ್ತು ರಚಿತಾ ನಟನೆಯಲ್ಲಿ ಸಿನಿಮಾ ಮೂಡಿಬರಬೇಕಿತ್ತು. ಉಪ್ಪಿ ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ಒಪ್ಪಿಕೊಂಡಿದ್ದರು. ಈ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಾಣ ಮತ್ತು ಕೆ.ಮಾದೇಶ್ ನಿರ್ದೇಶನ ಮಾಡುವುದಿತ್ತು.

₹23 ಲಕ್ಷ ಸಂಭಾವನೆಗೆ ನಟಿ ಕಮಿಟ್ ಆಗಿದ್ದರು. ಮುಂಗಡವಾಗಿ ₹ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು. 2017 ರಲ್ಲಿ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್‌ಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಬಂದಿರಲಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ, ಆಗ ಬರ್ತೀನಿ ಅಂತಾ ಸತಾಯಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ದರ್ಶನ್ ಫ್ಯಾನ್ಸ್‌ ವಿಚಾರದಿಂದ ನನ್ನ ಹೆಂಡ್ತಿ ಸಂಬಂಧ ಹಾಳಾಗಿದೆ: ಪ್ರಥಮ್ ಆಕ್ರೋಶ

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇಡಿ ಮುಂದೆ ಹಾಜರಾದ ಪ್ರಕಾಶ್ ರಾಜ್

ಮತ್ತೊಂದು ಸಿನಿಮಾ ಘೋಷಿಸಿದ ರಿಷಭ್ ಶೆಟ್ಟಿ: ನೆಟ್ಟಿಗರಿಂದ ಆಕ್ಷೇಪ

ಯುವ ಪತ್ನಿ ವಿಚಾರವೆತ್ತಿದ್ದಕ್ಕೆ ರೊಚ್ಚಿಗೆದ್ದ ದೊಡ್ಮನೆ ಫ್ಯಾನ್ಸ್

ಮುಂದಿನ ಸುದ್ದಿ
Show comments