Select Your Language

Notifications

webdunia
webdunia
webdunia
webdunia

ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್ ವಿರುದ್ಧ ದೂರು ದಾಖಲು

ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್ ವಿರುದ್ಧ ದೂರು ದಾಖಲು
ಮುಂಬೈ , ಬುಧವಾರ, 26 ಸೆಪ್ಟಂಬರ್ 2018 (08:58 IST)
ಮುಂಬೈ : ಮದ್ಯಪಾನ ಮಾಡಿ ವಾಹನ ಚಾಲಾಯಿಸಿದ ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ನಟ ದಲೀಪ್ ತಾಹಿಲ್ ಇಲ್ಲಿನ ಖಾರ್ ಪ್ರದೇಶಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದಲ್ಲದೇ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಆ ವೇಳೆ ಆಟೋದಲ್ಲಿದ್ದ ಜೆನಿತಾ ಗಾಂಧಿ ಹಾಗೂ ಗೌರವ್ ಎಂಬುವವರು ಈ ಬಗ್ಗೆ ದಲೀಪ್ ಅವರನ್ನು ಪ್ರಶ್ನಿಸಿದಾಗ ಕುಡಿದ ಅಮಲಿನಲ್ಲಿದ್ದ ತಾಹಿಲ್, ಇಬ್ಬರ ಜೊತೆ ವಾಗ್ವಾದಕ್ಕಿಳಿದು ಗೌರವ್ ಎಂಬುವವರನ್ನು ತಳ್ಳಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿದ ಗೌರವ್, ಕುಡಿದ ಮತ್ತಿನಲ್ಲಿ ನಟ ದಲೀಪ್ ತಾಹಿಲ್ ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರು ನೀಡಿದ್ದಾರೆ.


ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ತಾಹಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ನಟ ತಾಹಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಾಖಿ ಸಾವಂತ್ ತಮ್ಮ ಸ್ತನಗಳನ್ನು ದಾನ ಮಾಡುತ್ತಾರಂತೆ! ಅದು ಯಾರಿಗಾಗಿ ಗೊತ್ತಾ?