Select Your Language

Notifications

webdunia
webdunia
webdunia
webdunia

ನಟಿ ರಾಖಿ ಸಾವಂತ್ ತಮ್ಮ ಸ್ತನಗಳನ್ನು ದಾನ ಮಾಡುತ್ತಾರಂತೆ! ಅದು ಯಾರಿಗಾಗಿ ಗೊತ್ತಾ?

ನಟಿ ರಾಖಿ ಸಾವಂತ್  ತಮ್ಮ  ಸ್ತನಗಳನ್ನು ದಾನ ಮಾಡುತ್ತಾರಂತೆ! ಅದು ಯಾರಿಗಾಗಿ  ಗೊತ್ತಾ?
ಮುಂಬೈ , ಬುಧವಾರ, 26 ಸೆಪ್ಟಂಬರ್ 2018 (07:17 IST)
ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ನ ಮಾದಕ ನಟಿ ರಾಖಿ ಸಾವಂತ್ ಇದೀಗ ತಮ್ಮ ಸ್ತನಗಳನ್ನು ದಾನ ಮಾಡುವುದರ ಮೂಲಕ ಸುದ್ದಿಯಾಗಿದ್ದಾರೆ.


ಎಲ್ಲರು ಕಣ್ಣು, ಹೃದಯ, ಕಿಡ್ನಿ ದಾನ ಮಾಡಿದರೆ 39 ವರ್ಷದ ರಾಕಿ ಸಾವಂತ್​, ತಮ್ಮ ಸ್ತನಗಳನ್ನು ದಾನ ಮಾಡಬೇಕೆಂದುಕೊಂಡಿದ್ದೇನೆ ಎಂದು ತಮ್ಮ  ಇನ್​​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್​ ಆಗುತ್ತಿದೆ.


ಈ ವಿಡಿಯೋ ದಲ್ಲಿ ನೇತ್ರದಾನ ಮಾಡಿರುವ ಐಶ್ವರ್ಯ ರೈ ಬಚ್ಚನ್​ ಅವರನ್ನು ಕೊಂಡಾಡಿದ ನಟಿ ರಾಖಿ ಸಾವಂತ್ ಜನರು ತಮ್ಮ ಅಂಗಾಗಳನ್ನು ದಾನ ಮಾಡುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ. ನಾನು ಕೂಡ ಅವರನ್ನೇ ಹಿಂಬಾಲಿಸಬೇಕೆಂದುಕೊಂಡಿದ್ದೇನೆ. ಆದ್ದರಿಂದ ನಾನು ನನ್ನ ಸ್ತನಗಳಗಳನ್ನು ದಾನ ಮಾಡುವುದಾಗಿ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.


ಸ್ತನ ಕ್ಯಾನ್ಸರ್​ನಿಂದ ಬಳಲುವ ಮಹಿಳೆಯರ ಅಂಗಾಂಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ. ಆದ್ದರಿಂದ ನಾನೇಕೆ ನನ್ನ ಸ್ತನಗಳನ್ನು ದಾನ ಮಾಡಬಾರದು? ಎಂದು ನಾನು ಯೋಚಿಸಿದೆ. ಈ ನಿರ್ಧಾರದಿಂದ ಗದ್ದಲ ಸೃಷ್ಟಿಯಾದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಮಗುವಿಗೆ ಜನ್ಮ ನೀಡಿದ ನಟಿ ರಂಭಾ