ಕೊತ್ತಲವಾಡಿ ತಂಡದ ವಿರುದ್ಧ ಆರೋಪ ಮಾಡಿದ್ದ ಸಹನಟಿ ಸ್ವರ್ಣಗೆ ಬಿಗ್‌ ಶಾಕ್‌

Sampriya
ಬುಧವಾರ, 17 ಸೆಪ್ಟಂಬರ್ 2025 (18:10 IST)
Photo Credit X
ಕೊತ್ತಲವಾಡಿ ಚಿತ್ರದಲ್ಲಿ ಅಭಿನಯಿಸಿದ್ದ ಸಹನಟಿ ತನಗೆ ಸಿನಿಮಾ ತಂಡದಿಂದ ಸಂಭಾವನೆ ಬಂದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಸ್ವರ್ಣ ವಿರುದ್ಧ ಇದೀಗ ದೂರು ದಾಖಲಾಗಿದೆ. 

ಸ್ವರ್ಣಗೂ ಮುನ್ನಾ ಸಹನಟ ಮಹೇಶ್ ಗುರು ಕೂಡಾ ಸಿನಿಮಾ ತಂಡದ ವಿರುದ್ಧ ಆರೋಪ ಮಾಡಿ, ತನಗೆ ಸಂಭಾವನೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದರು. 

ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಶ್ರೀರಾಜ್ ಹಾಗೂ ನಿರ್ಮಾಣ ಸಂಸ್ಥೆ ವಿರುದ್ಧ ಆರೋಪ ಮಾಡಿದ್ದರು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಶ್ರೀರಾಜ್, ಕಲಾವಿದ ಮಹೇಶ್ ವಿರುದ್ಧ ದೂರು ನೀಡಿದ್ದರು. ಇದೀಗ ಸಹನಟಿ ಸ್ವರ್ಣ ವಿರುದ್ಧವೂ ದೂರು ನೀಡಿದ್ದಾರೆ.

ಕೊತ್ತಲವಾಡಿ ಸಹನಟಿ ಸ್ವರ್ಣ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವೀಡಿಯೋ ಮೂಲಕ ನಿರ್ದೇಶಕರ ವಿರುದ್ಧ ಮಾತನಾಡಿದ್ದರು. ಸಿನಿಮಾದಲ್ಲಿ ಕಷ್ಟ ಪಟ್ಟು ನಟಿಸಿದ್ದೇನೆ. ಸಂಭಾವನೆಯ ಬಗ್ಗೆ ಮಾತನಾಡಿರುವಷ್ಟು ಅವರು ಹಣ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. 
ಹೀಗಾಗಿ ನಿರ್ದೇಶಕ ಶ್ರೀರಾಜ್ ಅವರು ನಟಿ ಸ್ವರ್ಣ ವಿರುದ್ಧ ದೂರು ದಾಖಲಿಸಿದ್ದಾರೆ.

ವೈಯಕ್ತಿಕ ತೇಜೋವಧೆ ಹಾಗೂ ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್ ಸಿನಿಮಾ ನಿರ್ಮಾಣ ಸಂಸ್ಥೆಗೆ ಮಾನಹಾನಿ ಮಾಡಿರುವುದನ್ನ ಖಂಡಿಸಿ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments