Webdunia - Bharat's app for daily news and videos

Install App

ಕಾಲಿವುಡ್‌ನಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಸ್ಮೈಲ್‌ ರಾಜ ಹಾಸ್ಯನಟ ಮದನ್‌ಬಾಲು ನಿಧನ

Sampriya
ಭಾನುವಾರ, 3 ಆಗಸ್ಟ್ 2025 (11:54 IST)
Photo Credit X
ಚೆನ್ನೈ: ಕಾಲಿವುಡ್‌ನಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಾಸ್ಯನಟ ಮದನ್ ಬಾಬ್ ಅವರು ನಿಧನರಾಗಿದ್ದಾರೆ. 

ಮದನ್ ಬಾಬ್ ( ಕೃಷ್ಣಮೂರ್ತಿ ) ಶನಿವಾರ ಸಂಜೆ ಚೆನ್ನೈನಲ್ಲಿ 71ನೇ ವಯಸ್ಸಿನಲ್ಲಿ ನಿಧನರಾದರು. ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧಿಯಾದ ಇವರು ಕೆಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದ್ಯಾರ್‌ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದರು. 

ಅವರನ್ನು ಸ್ಮೈಲ್‌ನ ರಾಜ ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು. ವಿಶಿಷ್ಟ ಹಾಸ್ಯ ಶೈಲಿ, ಟ್ರೇಡ್‌ಮಾರ್ಕ್ ನಗು, ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸುವ ಗುಣಕ್ಕೆ ಹೆಸರಾಗಿದ್ದರು. 

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 1992 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ವಾನಮೇ ಎಲ್ಲೈ ಸಿನಿಮಾ ಮೂಲಕ ಅವರು ಚಿತ್ರರಂಗ ಪ್ರವೇಶ ಮಾಡಿದರು.

ತಮಿಳು ಚಿತ್ರರಂಗದ ಕೆಲವು ದೊಡ್ಡ ಬ್ಲಾಕ್‌ ಬಸ್ಟರ್‌ಗಳು ಮತ್ತು ಆರಾಧನಾ ಮೆಚ್ಚಿನವುಗಳಲ್ಲಿ ಪೋಷಕ ನಟನಾಗಿ ಮನೆಮಾತಾಗಿದ್ದರು. ರಜನಿಕಾಂತ್, ಕಮಲ್ ಹಾಸನ್, ಅಜಿತ್, ಸೂರ್ಯ ಮತ್ತು ವಿಜಯ್‌ರಂತಹ ತಾರೆಯರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

ದೂರದರ್ಶನದಲ್ಲಿ ಅವರು ಅಸಥಪೋವಧು ಯಾರು ಎಂಬ ಹಿಟ್ ಹಾಸ್ಯ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಆಗಿದ್ದರು. ಅಲ್ಲದೇ, ಅವರು ಹಲವಾರು ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದರು. ನಟನೆಗೆ ಪ್ರವೇಶಿಸುವ ಮೊದಲು ಕೀಬೋರ್ಡ್ ವಾದಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

ಮದನ್ ಬಾಬ್ ಎರಡು ಮಲಯಾಳಂ ಚಲನಚಿತ್ರಗಳು ಮತ್ತು ಒಂದು ಹಿಂದಿ ಚಲನಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದ ಕಲಾವಿದರು ಹಿರಿಯ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೀತಿಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೂಟಿಂಗ್‌ಗಾಗಿ ತಂಗಿದ್ದ ಹೊಟೇಲ್‌ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟ ಕಲಾಭವನ್‌

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗುತ್ತಿದ್ದಂತೇ ನಟಿ ರಮ್ಯಾ ರಿಯಾಕ್ಷನ್ ನೋಡಿ

ವಿಜಯ್ ದೇವರಕೊಂಡ ಸೋಲಿನ ಸರಣಿಯನ್ನು ಕೊನೆಗೊಳಿಸಿದ ಕಿಂಗ್‌ಡಮ್‌: ಗೆಳೆಯನ ಸಕ್ಸಸ್‌ಗೆ ರಶ್ಮಿಕಾ ಫುಲ್ ಹ್ಯಾಪಿ

ದಿ ಕೇರಳ ಸ್ಟೋರಿ ಸಿನಿಮಾಗೆ ರಾಷ್ಟ್ರೀಯ ಮನ್ನಣೆ: ಸಿಎಂ ಸೇರಿದಂತೆ ಹಲವರಿಂದ ಅಸಮಾಧಾನ

ಸು ಫ್ರಮ್ ಸೋ ಸಿನಿಮಾಗೆ ಮಲಯಾಳದಲ್ಲಿ ಹೇಗಿದೆ ರೆಸ್ಪಾನ್ಸ್: ಕನ್ನಡದಲ್ಲಿ ಹೊಸ ದಾಖಲೆ

ಮುಂದಿನ ಸುದ್ದಿ
Show comments