Publish Date: Sun, 31 Oct 2021 (09:16 IST)
Updated Date: Sun, 31 Oct 2021 (09:19 IST)
ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಇನ್ನು ನೆನಪು ಮಾತ್ರ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಮಣ್ಣಲ್ಲಿ ಮಣ್ಣಾದರು.
ಕುಟುಂಬಸ್ಥರು ಸೇರಿ ಹಲವು ಗಣ್ಯರು ಪುನೀತ್ಗೆ ಅಂತಿಮ ನಮನ ಸಲ್ಲಿಸಿದರು. ಪುನೀತ್ ಅಂತಿಮ ಯಾತ್ರೆಗೂ ಮುನ್ನ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪವರ್ ಸ್ಟಾರ್ಗೆ ನಮನ ಸಲ್ಲಿಸಿದರು. ಈ ವೇಳೆ ಭಾವುಕರಾದ ಅವರು ಪಾರ್ಥಿವ ಶರೀರಕ್ಕೆ ಕೈಮುಗಿದು, ಹಣೆಗೆ ಮುತ್ತಿಟ್ಟರು. ಪುನೀತ್ರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಹೀಗಾಗಿ ಪುನೀತ್ ಅಂತ್ಯಕ್ರಿಯೆ ವೇಳೆ ಭಾವುಕನಾದೆ ಅಂತ ಕಂಠೀರವ ಸ್ಟೇಡಿಯಂ ಬಳಿ ಸಿಎಂ ಬೊಮ್ಮಾಯಿ ಹೇಳಿದರು.