Publish Date: Sun, 31 Oct 2021 (09:06 IST)
Updated Date: Sun, 31 Oct 2021 (09:08 IST)
ಅಭಿಮಾನಿಗಳ ಕರುಳು ಹಿಂಡುವಂತಿತ್ತು ಆ ನೋವಿನ ಕ್ಷಣ. ಸಹೋದರ ಪುನೀತ್ ರಾಜ್ಕುಮಾರ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದರು ನಟ ಶಿವರಾಜ್ಕುಮಾರ್.
ಎಲ್ಲ ವೇದಿಕೆಗಳಲ್ಲೂ ಅವರು ಪುನೀತ್ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅಂಥ ಹೆಮ್ಮೆಯ ತಮ್ಮನನ್ನೇ ಕಳೆದುಕೊಂಡ ಬಳಿಕ ಶಿವಣ್ಣನಿಗೆ ಮುಗಿಲು ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಸಹೋದರನ ಅಂತ್ಯಕ್ರಿಯೆ ವೇಳೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶಿವರಾಜ್ಕುಮಾರ್ ಅವರನ್ನು ಈ ರೀತಿ ನೋಡುವಾಗ ಅಭಿಮಾನಿಗಳ ಕರುಳು ಹಿಂಡುತ್ತದೆ. ಆದರೆ ವಿಧಿಗೆ ಯಾವುದೇ ಕರುಣೆ ಇಲ್ಲ. ಎಲ್ಲರ ಪ್ರೀತಿಯ ನಟನನ್ನು ಜವರಾಯ ಹೊತ್ತೊಯ್ದಿದ್ದಾನೆ.