ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಇದೀಗ ಡ್ರಗ್ ಜಾಲದ ವಿಷಯ ಸದ್ದು ಮಾಡುತ್ತಿದೆ.
ರಾಜ್ಯದಲ್ಲಿ ಬಂಧಿತರಾಗಿರುವ ಮೂವರು ಡ್ರಗ್ ಡೀಲರ್ ಗಳು ನಟರಿಗಿಂತ ನಟಿಯರೇ ಹೆಚ್ಚಾಗಿ ಡ್ರಗ್ ಬಳಸುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದ್ದು, ಇದು ವೈರಲ್ ಆಗುತ್ತಿದೆ.
ಅಷ್ಟಕ್ಕೂ ಡ್ರಗ್ ಸೇವನೆ ಮಾಡಿದರೆ ತಮ್ಮ ಬ್ಯೂಟಿ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಕೆಲವು ಸಿನಿಮಾ ನಟಿಯರು ನಂಬಿದ್ದಾರಂತೆ. ಹೀಗಾಗಿ ಕೆಲವು ನಟಿಯರೇ ಮಾದಕ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಿದ್ದರು ಎಂದು ಎನ್ ಸಿ ಬಿ ಅಧಿಕಾರಿಗಳ ವಿಚಾರಣೆ ವೇಳೆ ಆರೋಪಿಗಳು ನಟಿಯರ ಸೀಕ್ರೆಟ್ ಹೊರಹಾಕಿದ್ದಾರೆ ಎನ್ನಲಾಗಿದೆ.