Select Your Language

Notifications

webdunia
webdunia
webdunia
webdunia

ಕಾರ್ಮಿಕರ ದಿನಾಚರಣೆಗಾಗಿ ಚೌಕ ಚಿತ್ರದ ಟೀಸರ್

ಕಾರ್ಮಿಕರ ದಿನಾಚರಣೆಗಾಗಿ ಚೌಕ ಚಿತ್ರದ ಟೀಸರ್
, ಮಂಗಳವಾರ, 3 ಮೇ 2016 (11:52 IST)
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿ ಹಾಕಿರುವ ಸಿನಿಮಾಗಳಲ್ಲಿ ಒಂದು ಚೌಕ. ಈಗಾಗಲೇ ವಿವಿಧ ಮಾಧ್ಯಮಗಳಲ್ಲಿ ಬರುತ್ತಿರುವ ಜಾಹೀರಾತುಗಳ ಮೂಲಕ ಈ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಹೀಗಿರುವಾಗಲೇ ಸಿನಿಮಾ ತಂಡ ಸಿನಿಮಾದ ಟೀಸರ್ ನ್ನು ರಿಲೀಸ್ ಮಾಡಿದೆ.


ಅಂದ್ಹಾಗೆ ಚೌಕ ಸಿನಿಮಾ ಮಲ್ಟಿ ಸ್ಟಾರ್ ಗಳಿರುವ ವಿಭಿನ್ನವಾದ ಸಿನಿಮಾ. ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾ. ದ್ವಾರಕೀಶ್ ನಿರ್ಮಾಣದ 50ನೇ ಸಿನಿಮಾ. ಈಗಾಗಲೇ ತನ್ನ ವಿಭಿನ್ನ  ಜಾಹೀತಾರುಗಳಿಂದ ಗಮನ ಸೆಳೆದಿರುವ ಈ ಸಿನಿಮಾ ಮೊನ್ನೆ ಕಾರ್ಮಿಕರ ದಿನಾಚರಣೆಯ ಪ್ರಮುಕ್ತ ತನ್ನ ವಿಭಿನ್ನ ಟ್ರೇಲರ್ ರಿಲೀಸ್ ಮಾಡಿದೆ. ಈ ಟ್ರೇಲರ್ ನಲ್ಲಿ ಸಿನಿಮಾದಲ್ಲಿರು ಎಲ್ಲಾ ತಂತ್ರಜ್ಞರನ್ನು ಪರಿಚಯಿಸಲಾಗಿದೆ. ಅಲ್ಲದೇ ಯಾರೆಲ್ಲಾ ವರ್ಕ್ ಮಾಡಿದ್ದಾರೆ ಅನ್ನೋ ಡೀಟೆಲ್ಸ್ ನ್ನು ಈ ಟೀಸರ್ ನಲ್ಲಿ ನೀಡಲಾಗಿದೆ. ಹಾಗಾಗಿ ಟೀಸರ್ ಮೂಲಕವೂ ನಮ್ಮದು ಡಿಫರೆಂಟ್ ಆದ ಸಿನಿಮಾ ಅಂತಾ ತೋರಿಸಿಕೊಟ್ಟಿದೆ ಚೌಕ ಸಿನಿಮಾ ತಂಡ.
 
 ಚೌಕ ಸಿನಿಮಾದಲ್ಲಿ ದಿಗಂತ್. ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್ ಪ್ರೇಮ್ ಈ ನಾಲ್ವರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ.ಅಲ್ಲದೇ ಸಂಗೀತ, ಛಾಯಾಗ್ರಹಣ, ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸ್ಯಾಂಡಲ್ ವುಡ್ ನ ಅನೇಕ ಸಂಗೀತ ನಿರ್ದೇಶಕರು, ಕ್ಯಾಮೆರಾ ಮೆನ್ ಗಳು ಜೊತೆಯಾಗಿ ಕೆಲಸ ಮಾಡಿದ್ದಾರೆ. ಈಗಾಗಲೇ 70 ರಷ್ಟು ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಅತೀ ಶೀಘ್ರದಲ್ಲಿ ಪ್ರೇಕ್ಷಕರೆದುರಿಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಭಿನ್ನ ಅವತಾರದಲ್ಲಿ ಬರಲಿದ್ದಾರೆ ಸ್ಟೈಲ್ ಕಿಂಗ್