ಸಾಮಾನ್ಯ ಒಬ್ಬ ನಾಯಕ ಅಂದ್ರೆ ಆತ ಆ ಸಿನಿಮಾದಲ್ಲಿ ಇದೀ ರೀತಿಯ ಪಾತ್ರವನ್ನು ನಿರ್ವಹಿಸುತ್ತೇನೆ.ಆತ ಹೀಗಿದ್ರೇನೆ ಚೆಂದ ಅಂತಾ ಅಭಿಮಾನಿಗಳು ಅಂದುಕೊಳ್ಳುತ್ತಾರೆ. ಆದ್ರೆ ಈ ವಿಚಾರವನ್ನು ಕೊಚಂ ಬದಲಾಯಿಸೋದಕ್ಕೆ ಹೊರಟಿದ್ದಾರೆ ಸ್ಯಾಂಡಲ್ ವುಡ್ ನಿರ್ದೇಶಕ ಶೇಖರ್. ಅದು ಗಣೇಶ್ ಅವರ ಸ್ಟೈಲ್ ಕಿಂಗ್ ಸಿನಿಮಾದಲ್ಲಿ.
ಸ್ಟೈಲ್ ಕಿಂಗ್ ಸಿನಿಮಾದಲ್ಲಿ ಗಣೇಶ್ ಅವರು ಎರಡು ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಒಂದು ಪಾತ್ರ ಎಲ್ಲರಿಗೂ ಇಷ್ಟವಾಗುವಂತಹ ಲವರ್ ಬಾಯ್ ಹಾಗೇ ರೋಮ್ಯಾಂಟಿಕ್ ಹುಡುಗ ಪಾತ್ರ. ಆದ್ರೆ ಇದೊಂದೇ ಪಾತ್ರವಲ್ಲ ಇದಕ್ಕೆ ವಿರುದ್ಧವಾದ ಪಾತ್ರವನ್ನು ಸಿನಿಮಾದಲ್ಲಿ ಗಣೇಶ್ ಅವರ ಕೈಯಿಂದ ಮಾಡಿಸುತ್ತಿದ್ದಾರಂತೆ ಶೇಖರ್.
ಮಾಸ್ ಆಡಿಯನ್ಸ್ ಗಾಗಿ ಅವರು ಈ ಪಾತ್ರವನ್ನು ಮಾಡಿಸುತ್ತಿದ್ದಾರಂತೆ.ಅಲ್ಲದೇ ಈ ಸಿನಿಮಾದಲ್ಲಿ ಗಣೇಶ್ ಅವರು ನಿರವಹಿಸುತ್ತಿರುವ ಪಾತ್ರ ಎಲ್ಲರಿಗೂ ಇಷ್ಟವಾಗುವಂತಹ ಪಾತ್ರ ಅಂತಾ ಅವರು ಹೇಳಿದ್ದಾರೆ.ಇಷ್ಟು ದಿನ ಗಣೇಶ್ ಅವರನ್ನು ಒಂದೇ ರೀತಿಯ ಬೇರೆ ಬೇರೆ ಪಾತ್ರಗಳಲ್ಲಿ ನೀವು ನೋಡಿದ್ದೀರಿ ಆದ್ರೆ ಈ ಬಾರಿ ಹಾಗಲ್ಲ ಅಂತಾ ಅವರು ಹೇಳಿದ್ದಾರೆ.
ಇನ್ನು ಗಣೇಶ್ ಅವರ ಹತ್ರ ಈ ವಿಭಿನ್ನವಾದ ಪಾತ್ರವನ್ನು ಮಾಡಿಸಬೇಕಾದ್ರೆಇಡೀ ಸಿನಿಮಾ ತಂಡ ಸಾಕಷ್ಟು ಕಷ್ಟಪಟ್ಟಿದೆಯಂತೆ.ಅವರ ಬಾಡಿ ಲ್ಯಾಗ್ವೇಜ್,ಫಿಸಿಕಲ್ ಅಪಿಯರೆನ್ಸ್ ಹೀಗೆ ಎಲ್ಲವೂ ಭಿನ್ನವಾಗಿರಬೇಕಾಗಿರೋದರಿಂದ ನಿರ್ದೇಶಕರು ಹಾಗೇ ಗಣೇಶ್ ಸಾಕಷ್ಟು ಶ್ರಮ ಪಡುತ್ತಿದ್ದಾರಂತೆ.
ಹಾಗಾಗಿ ಗಣೇಶ್ ಅವರ ಪಾತ್ರ ಸಿನಿಮಾದಲ್ಲಿ ಹೇಗಿರಬಹುದು ಅನ್ನೋ ಕುತೂಹಲ ಎಲ್ಲರಿಗೂ ಇದೇ. ಆ ಕುತೂಹಲಕ್ಕೆ ಉತ್ತಮ ಪ್ರತಿಫಲ ನೀಡೋದಕ್ಕಾಗಿ ಸಿನಿಮಾ ತಂಡ ಸಾಕಷ್ಟು ಕಸರತ್ತು ಮಾಡುತ್ತಿದೆ.