Select Your Language

Notifications

webdunia
webdunia
webdunia
webdunia

ಪ್ಯಾರಿಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲ್ಲಿಕಾ ಶೆರಾವತ್

Mallika Sherawat
ಮುಂಬೈ , ಮಂಗಳವಾರ, 3 ಮೇ 2016 (11:08 IST)
ಪ್ಯಾರಿಸ್ ಅಂತರಾಷ್ಟ್ರೀಯ ಚಲನಚಿತ್ರ ಸಮಾರಂಭಕ್ಕೆ ಭಾಗಿಯಾಗಲಿದ್ದಾಳೆ ಹಾಟ್ ನಟಿ ಮಲ್ಲಿಕಾ ಶೆರಾವತ್...ಪ್ಯಾರಿಸ್ ಅಂತರಾಷ್ಟ್ರೀಯ ಚಲನಚಿತ್ರೋದ್ಯಮದ ಫೆಸ್ಟಿವಲ್‌ಗೆ ಹಾಟ್ ನಟಿ ಮಲ್ಲಿಕಾ ಶೆರಾವತ್ ಭಾಗಿಯಾಗಲಿದ್ದಾಳೆ... ಐಶ್ವರ್ಯ ರೈ ಬಚ್ಚನ್ ಹಾಗೂ ಸೋನಮ್ ಕಪೂರ್ ಹಾಗೂ ಮಲ್ಲಿಕಾ ಶೆರಾವತ್ ಫಿಲ್ಮಂ ಫೆಸ್ಟಿವಲ್‌ಗೆ ಭಾಗಿಯಾಗಲಿದ್ದಾರೆ..
39 ವರ್ಷದ ಮರ್ಡರ್ ಚಿತ್ರ ಖ್ಯಾತಿಯ ಮಲ್ಲಿಕಾ ಶೆರಾವತ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ತಾವು ಸಿನಿಮಾ ಫೆಸ್ಟಿವಲ್‌ಗೆ ಭಾಗಿಯಾಗಲಿರು ಬಗ್ಗೆ ತಿಳಿಸಿದ್ದಾರೆ.. 
 
ಪ್ಯಾರಿಸ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯ ರೈ ಹಾಗೂ ಸೋನಮ್ ಕಪೂರ್ ಮುಂಬರುವ ಕ್ಯಾನ್ನೆಸ್ 69 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಗಮನ ಸೆಳೆಯಲಿದ್ದಾರೆ. 
 
ಕಾಸ್ಮೆಟಿಕ್ ಅಂಬಾಸಿಡರ್ ಆಗಿರುವ ಸೋನಮ್ ಹಾಗೂ ಐಶ್ವರ್ಯ ಕಳೆದ ವರ್ಷದಂದು ಭಾಗಿಯಾಗಿದ್ದರು. ಈ ವೇಳೆ ಅಂದು ರೆಡ್ ಕಾರ್ಪೆಂಟ್ ನಲ್ಲಿ ಮಿಂಚಿದ್ದರು. ಕ್ಯಾಟ್ ವಾಕ್ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು, ಅದೇ ರೀತಿ ಮುಂದಿನ ಚಲನಚಿತ್ರೋತ್ಸವದಲ್ಲಿ ಇಬ್ಬರು ಎಲ್ಲರ ಗಮನ ಸೆಳೆಯಲಿದ್ದಾರೆ. 
 
2016ರ ಕ್ಯಾನ್ನೆಸ್ ಫಿಲ್ಮಂ ಫೆಸ್ಟಿವಲ್ ಮೇ 11 ರಿಂದ 22ವರೆಗೆ ನಡೆಯಲಿದೆ. ಇತ್ತೀಚೆಗೆ ನಿರ್ಜಾ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಸೋನಮ್ ಕಪೂರ್ , ಅವರ ಲೈಫ್ ನಲ್ಲೇ ವಿಭಿನ್ನ ಚಿತ್ರದಲ್ಲಿ ನಟಿಸಿದ್ದ ಕೀರ್ತಿ ಸೋನಮ್ ಅವರಿಗೆ ಸಲ್ಲುತ್ತದೆ. ದೇಶದೆಲ್ಲೆಡೆ ಈ ಚಿತ್ರ ಪ್ರಶಂಸೆಗೆ ಕಾರಣವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕ್ಟ್ರಾನಿಕ್ ಧೂಮಪಾನ ಬಳಕೆ ಮಾಡಿದ ರಣಬೀರ್ ಕಪೂರ್..