Select Your Language

Notifications

webdunia
webdunia
webdunia
webdunia

ಚಿರಂಜೀವಿ-ಪವನ್ ಕಲ್ಯಾಣ್ ಮಲ್ಟಿಸ್ಟಾರರ್ ಸಿನಿಮಾ!

ಚಿರಂಜೀವಿ-ಪವನ್ ಕಲ್ಯಾಣ್ ಮಲ್ಟಿಸ್ಟಾರರ್ ಸಿನಿಮಾ!
Hyderabad , ಶುಕ್ರವಾರ, 3 ಫೆಬ್ರವರಿ 2017 (14:19 IST)
ಮೆಗಾಸ್ಟಾರ್ ಚಿರಂಜೀವಿ ಮತ್ತವರ ’ತಮ್ಮುಡು’ ಪವನ್ ಕಲ್ಯಾಣ್ ಜತೆಯಾಗಿ ಅಭಿನಯಿಸುವ ಗಳಿಕೆ ಬಂದಿದೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕಾಗಿ ಟಾಲಿವುಡ್ ಪ್ರೇಕ್ಷಕರು ಬಹಳ ಕಾಲದಿಂದ ನಿರೀಕ್ಷಿಸುತ್ತಿದ್ದರು. ಈಗ ಆ ಕನಸು ನೆರವೇರುವ ಸಮಯ ಬಂದಿದೆ. 
 
ತೆಲುಗಿನ ನಿರ್ಮಾಪಕ ಟಿ.ಸುಬ್ಬರಾಮಿರೆಡ್ಡಿ ಎಂಬುವವವರು ಇವರಿಬ್ಬರ ಸಿನಿಮಾ ಮಾಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಫ್ಯಾಮಿಲಿ, ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುತ್ತಿವೆ ಟಾಲಿವುಡ್ ಮೂಲಗಳು.
 
ತೆಲುಗಿನ ಮತ್ತೊಬ್ಬ ಅದ್ದೂರಿ ಚಿತ್ರಗಳ ನಿರ್ಮಾಪಕ ಅಶ್ವಿನಿದತ್ ಜತೆಗೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ತೆರೆಕಂಡ ’ಖೈದಿ ನಂಬರ್ 150’ ಚಿತ್ರ ಬಾಕ್ಸ್ ಆಫೀಸಲ್ಲಿ ಷೇಕ್ ಡ್ಯಾನ್ಸ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿರು ಚಿತ್ರಗಳಿಗೆ ಮತ್ತೆ ಬಲಬಂದಂತಾಗಿದೆ. ಇನ್ನು ಅಣ್ಣತಮ್ಮಂದಿರ ಕಾಂಬಿನೇಷನ್ ಎಂದರೆ ಕೇಳಬೇಕೆ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಶಾಲ್ ಮೇಲಿನೆ ನಿಷೇಧ ತೆರವು