Select Your Language

Notifications

webdunia
webdunia
webdunia
webdunia

ನಟ ವಿಶಾಲ್ ಮೇಲಿನೆ ನಿಷೇಧ ತೆರವು

ನಟ ವಿಶಾಲ್ ಮೇಲಿನೆ ನಿಷೇಧ ತೆರವು
Chennai , ಶುಕ್ರವಾರ, 3 ಫೆಬ್ರವರಿ 2017 (14:08 IST)
ನಟ, ನಿರ್ಮಾಪಕ ವಿಶಾಲ್ ಮೇಲೆ ಕೋಲಿವುಡ್ ನಿರ್ಮಾಪಕ ಮಂಡಳಿ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ತನ್ನನ್ನು  ಮಂಡಳಿಯಿಂದ ಹೊರಹಾಕಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು ವಿಶಾಲ್. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ವಿಶಾಲ್ ಮೇಲಿನ ನಿಷೇಧಾಜ್ಞೆಯನ್ನು ತೆರವುಗೊಳಿಸುವಂತೆ ನಿರ್ಮಾಪಕರ ಮಂಡಳಿಗೆ ಆದೇಶಿಸಿದೆ.
 
ದಕ್ಷಿಣ ಭಾರತ ನಟನಟಿಯರರ್ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ವಿಶಾಲ್... ನಿರ್ಮಾಪಕರ ಮಂಡಳಿ ಸದಸ್ಯರೂ ಆಗಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ನಿರ್ಮಾಪಕರ ಸಂಘದ ಚುನಾವಣೆಯಲ್ಲೂ ವಿಶಾಲ್ ತಂಡ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಮಂಡಳಿ ಬಗ್ಗೆ ವಿಶಾಲ್ ಮಾತನಾಡುತ್ತಾ, ಸಂಘದ ಸದಸ್ಯರು ಪಂಚಾಯಿತಿ ಕಟ್ಟೆ ತರಹ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದರು.
 
ಈ ಬಗ್ಗೆ ಮಂಡಳಿ ಅಸಂತೃಪ್ತಿ ವ್ಯಕ್ತಪಡಿಸಿ, ಅವರಿಗೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು ವಿಶಾಲ್. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ವಿಶಾಲ್ ಹೇಳಿಕೆಯಲ್ಲಿ ತಪ್ಪೇನಿದೆ. ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅವರ ಮೇಲಿನ ನಿಷೇಧ ತೆರವುಗೊಳಿಸುವಂತೆ ಆದೇಶಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಗಂಡ ಪ್ರೋತ್ಸಾಹಿಸುತ್ತಿದ್ದಾರೆ: ಪ್ರೀತಿ ಜಿಂಟಾ