Select Your Language

Notifications

webdunia
webdunia
webdunia
webdunia

ರೂ.100 ಕೋಟಿ ಕ್ಲಬ್ ಸೇರಿದ ಚಿರಂಜೀವಿ ಸಿನಿಮಾ

ಖೈದಿ ನಂಬರ್ 150
Hyderabad , ಮಂಗಳವಾರ, 17 ಜನವರಿ 2017 (10:41 IST)
ಸುಮಾರು 10 ವರ್ಷಗಳ ಬಳಿಕ ಚಿರಂಜೀವಿ ನಾಯಕನಟನಾಗಿ ಅಭಿನಯಿಸಿರುವ ಖೈದಿ ನಂಬರ್ 150 ಚಿತ್ರ, ಸಂಕ್ರಾಂತಿ ಉಡುಗೊರೆಯಾಗಿ ಪ್ರೇಕ್ಷಕರ ಮುಂದೆ ಬಂದಿದ್ದು ಗೊತ್ತೇ ಇದೆ. ಬಾಕ್ಸ್ ಆಫೀಸಲ್ಲಿ ಒಳ್ಳೇ ಫಸಲನ್ನೇ ತಂದಿದೆ. ಜನವರಿ 11ರಂದು ಬಿಡುಗಡೆಯಾದ ಖೈದಿ ಇದುವರೆಗೂ ರೂ.106ಕೋಟಿ ಕಲೆಕ್ಷನ್ ಮಾಡಿದೆ.
 
ಸಾಗರೋತ್ತರ ಬಾಕ್ಸ್ ಆಫೀಸ್ ನಲ್ಲೂ ಚಿರಂಜೀವಿ ಚಿತ್ರಕ್ಕೆ ಒಳ್ಳೇ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೆರಿಕಾದಲ್ಲೇ ಶನಿವಾರದ ಹೊತ್ತಿಗೆ ರೂ.13.11 ಕೋಟಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಅನಲಿಸ್ಟ್ ತರುಣ್ ಆದರ್ಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
 
ತಮಿಳಿನಲ್ಲಿ ಭರ್ಜರಿ ಜಯ ಸಾಧಿಸಿದ ’ಕತ್ತಿ’ ಸಿನಿಮಾ ರೀಮೇಕ್ ಇದು. ತೆಲುಗಿನಲ್ಲಿ ಖೈದಿ ನಂಬರ್ 150 ಎಂದು ಹೆಸರಿಡಲಾಯಿತು. ವಿ.ವಿ ವಿನಾಯಕ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ನಾಯಕಿ ಕಾಜಲ್ ಅಗರವಾಲ್. ದೇವಿಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದ್ದು ಕೋಣಿದೆಲ ಪ್ರೊಡಕ್ಷನ್ ಕಂಪೆನಿ ಬ್ಯಾನರ್‌ನಲ್ಲಿ ರಾಮ್ ಚರಣ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

'ಆಕೆ' ಸಸ್ಪೆನ್ಸ್ ಥ್ರಿಲ್ಲರ್ ಟ್ರೇಲರ್ ( ವಿಡಿಯೋ)