Select Your Language

Notifications

webdunia
webdunia
webdunia
webdunia

ಮತ್ತೆ ಬರ್ತಿದ್ದಾರೆ ಆ ದಿನಗಳು ಖ್ಯಾತಿಯ ಚೇತನ್

ಆ ದಿನಗಳು #ಚೇತನ್ #ಸಿನಿಮಾ #ರಾಜವರ್ಧನ್
, ಮಂಗಳವಾರ, 28 ಜೂನ್ 2016 (09:55 IST)
ಆ ದಿನಗಳು ಸಿನಿಮಾ ನೋಡಿದ ಅಭಿಮಾನಿಗಳಿಗೆ ಚೇತನ್ ಅವರನ್ನು ಯಾವತ್ತಿಗೂ ಮರೆಯೋದಕ್ಕೆ ಸಾಧ್ಯವಿಲ್ಲ. ತನ್ನ ಮೊದಲ ಸಿನಿಮಾದ ಮೂಲಕವೇ ಭರವಸೆ ಮೂಡಿಸಿದ ಚೇತನ್ ಆ ಬಳಿಕ ಹೆಚ್ಚು ಸದ್ದು ಮಾಡಿದ್ದು ಮೈನಾ ಸಿನಿಮಾದ ಮೂಲಕ. ಮೈನಾ ಸಿನಿಮಾದ ಅವರ ಪಾತ್ರ ಇಂದಿಗೂ ಅಭಿಮಾನಿಗಳಿಗೆ ಕಣ್ಣಿಗೆ ಕಟ್ಟಿದಂತಿದೆ.

ಮೈನಾ ಸಿನಿಮಾದ ಬಳಿಕ ಚೇತನ್ ಇನ್ನು ಇದೇ ರೀತಿಯ ಅನೇಕ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಅಂತಾ ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ರು.ಆದ್ರೆ ಅವರ ಲೆಕ್ಕಾಚಾರದಂತೆ ನಡೆಯಲೇ ಇಲ್ಲ. ಚೇತನ್ ಅವರು ಹೇಳಿಕೊಳ್ಳುವಂತಹ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹೀಗಿರುವಾಗಲೇ ಚೇತನ್ ಅವರು ಎಲ್ ಹೋದ್ರು ಅಂತಾ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ರು. ಆದ್ರೆ ಚೇತನ್ ಅವರು ಮಾತ್ರ ಸದ್ದಿಲ್ಲದೇ ಸಿನಿಮಾವೊಂದಕ್ಕೆ ತಯಾರಿ ಮಾಡುತ್ತಿದ್ದರು. ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಚೇತನ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಫೋಟೋ ಶೂಟ್ ಕೂಡ ನಡೆದಿದೆ.
 
ಅಂದ್ಹಾಗೆ ಈ ಸಿನಿಮಾದಲ್ಲಿ ಚೇತನ್ ಅವರ ಜೊತೆ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಅವರು  ಅಭಿನಯಿಸುತ್ತಿದ್ದಾರೆ, ಮೇಘನಾ ರಾಜ್ ಹಾಗೂ ಸುಷ್ಮಿತಾ ಜೋಷಿ ಸಿನಿಮಾಕ್ಕೆ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಸುಹಾಸ್ ಶಿರರ್ವಾಲ್ಕರ್ ಅನ್ನೋರ ಮರಾಠಿ ಕಾದಂಬರಿ ಆಧಾರಿತ ಸಿನಿಮಾವಾಗಿದೆಯಂತೆ. ಶೀಘ್ರದಲ್ಲೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೋಯಾ ಅಖ್ತರ್ ಮುಂದಿನ ಸಿನಿಮಾದಲ್ಲಿ ರಣ್ ವೀರ್ ಸಿಂಗ್