Select Your Language

Notifications

webdunia
webdunia
webdunia
webdunia

ಜೋಯಾ ಅಖ್ತರ್ ಮುಂದಿನ ಸಿನಿಮಾದಲ್ಲಿ ರಣ್ ವೀರ್ ಸಿಂಗ್

ಜೋಯಾ ಅಖ್ತರ್ ಮುಂದಿನ ಸಿನಿಮಾದಲ್ಲಿ ರಣ್ ವೀರ್ ಸಿಂಗ್
, ಮಂಗಳವಾರ, 28 ಜೂನ್ 2016 (09:49 IST)
ಬಾಲಿವುಡ್‌ನ ಖ್ಯಾತ ನಿರ್ದೇಶಕರಾದ ಜೋಯಾ ಅಖ್ತರ್ ಅವರು ತಾನು ಸಿನಿಮಾ ಮಾಡುತ್ತೇನೆ ಅಂದಾಗ ಬಾಲಿವುಡ್‌ನಲ್ಲಿ ಮೊದಲು ಮೂಡಿದ ಪ್ರಶ್ನೆ ಸಿನಿಮಾಕ್ಕೆ ನಾಯಕ ಯಾರಾಗ್ತಾರೆ ಅಂತಾ. ಹಾಗಾಗಿ ಕಳೆದ ಕೆಲ ತಿಂಗಳುಗಳಿಂದ ಜೋಯಾ ಸಿನಿಮಾದ ಹೀರೋ ಯಾರು ಅನ್ನೋ ಪ್ರಶ್ನೆಗೆ ಅನೇಕ ಹೆಸರುಗಳು ಕೇಳಿ ಬಂದಿದ್ದವು. ಆದ್ರೆ ಇದೀಗ ಒಂದು ಹೆಸರು ಅಂತಿಮವಾಗಿದೆ.

ಅಂದ್ಹಾಗೆ ಜೋಯಾ ಅವರ ಮುಂದಿನ ಸಿನಿಮಾಕ್ಕೆ ನಾಯಕನಾಗಿ ಆಯ್ಕೆಯಾಗಿರೋದು ನಟ ರಣ್ ವೀರ್ ಸಿಂಗ್ ಅವರು. ಅಂದ್ಹಾಗೆ ಈ ಸಿನಿಮಾದಲ್ಲಿ ಇಬ್ಬರು ನಾಯಕರು ಇರಲಿದ್ದಾರಂತೆ. ಮೊದಲನೇ ನಾಯಕನಾಗಿ ರಣ್‌ವೀರ್ ಸಿಂಗ್ ಅವರು ಆಯ್ಕೆಯಾಗಿದ್ದಾರೆ. ಆದ್ರೆ ಚಿತ್ರದ ಎರಡನೇ ಹೀರೋ ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲವಂತೆ. ಅಂದ್ಹಾಗೆ ಸದ್ಯ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಫವಾದ್ ಖಾನ್ ಅವರು ರಣ್‌ವೀರ್ ಸಿಂಗ್ ಅವರ ಜೊತೆ ಅಭಿನಯಿಸುತ್ತಾರೆ ಎನ್ನಲಾಗುತ್ತಿದೆ.ಆದ್ರೆ ಫವಾದ್ ಸದ್ಯ ಯೇ ದಿಲ್ ಹೈ ಮುಷ್ಕಿಲ್ ಹಾಗೂ ಸಲ್ಮಾನ್ ಖಾನ್ ಅವರು ನಿರ್ಮಾಣ ಮಾಡುತಿರುವ ಸಿನಿಮಾದಲ್ಲೂ ಅಭಿನಯಿಸುತ್ತಿರೋದರಿಂದ ಅವರು ಈ ಸಿನಿಮಾದಲ್ಲಿ ಅಭಿನಯಿಸುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
 
ಅಂದ್ಹಾಗೆ ಈ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆಯಂತೆ.ಈ ಹಿಂದೆ ರಣ್ ವೀರ್ ಸಿಂಗ್ ಹಾಗೂ ಜೋಯಾ ಅಖ್ತರ್ ಅವರು ಜಿಂದಗಿ ನಾ ಮಿಲೇಗಿ ದುಬಾರಾ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಇನ್ನು ರಣ್ ವೀರ್ ಸಿಂಗ್ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ ಪದ್ಮಾವತಿ ಸಿನಿಮಾದಲ್ಲೂ ನಾಯಕಿನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ರಣ್ ವೀರ್ ಸಿಂಗ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾಜೀರಾವ್ ಮಸ್ತಾನಿ ಸಿನಿಮಾಕ್ಕೂ ಪ್ರಶಸ್ತಿ ಸಿಗುವ ಕಾತುರದಲ್ಲಿದ್ದೆ- ದೀಪಿಕಾ ಪಡುಕೋಣೆ