Webdunia - Bharat's app for daily news and videos

Install App

ಸಿನಿಮಾ ಬರಗಾಲ ಎದುರಿಸುತ್ತಿರುವ ಸ್ಯಾಂಡಲ್ ವುಡ್ ಗೆ ಓಯಸಿಸ್ ನಂತೆ ಬರ್ತಿದ್ದಾನೆ Chef ಚಿದಂಬರ

Krishnaveni K
ಸೋಮವಾರ, 3 ಜೂನ್ 2024 (10:18 IST)
ಬೆಂಗಳೂರು: ಅನಿರುದ್ಧ್ ಜತ್ಕಾರ್ ನಾಯಕರಾಗಿರುವ Chef ಚಿದಂಬರ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಬರಗಾಲ ಎದುರಿಸುತ್ತಿರುವ ಸ್ಯಾಂಡಲ್ ವುಡ್ ಓಯಸಿಸ್ ನಂತೆ ಈ ಸಿನಿಮಾ ಬರಲಿದೆ.
 

ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ನಟರ ಸಿನಿಮಾಗಳೇ ಬಿಡುಗಡೆಯಾಗುತ್ತಿಲ್ಲ ಎಂಬ ಕೊರಗಿದೆ. ಇದರಿಂದಾಗಿ ಥಿಯೇಟರ್ ಗಳೂ ಸಂಕಷ್ಟಕ್ಕೆ ಸಿಲುಕಿವೆ. ಇದರ ನಡುವೆ ಅನಿರುದ್ಧ್ ನಾಯಕರಾಗಿರುವ Chef ಚಿದಂಬರ ಎನ್ನುವ ಕಾಮಿಡಿ ಪ್ಲಸ್ ಥ್ರಿಲ್ಲರ್ ಕತೆಯಿರುವ ಸಿನಿಮಾ ತೆರೆಗೆ ಬರುತ್ತಿದೆ.

ಈ ಸಿನಿಮಾದ ಟ್ರೈಲರ್ ನ್ನು ಇತ್ತೀಚೆಗೆ ನಟ ರಮೇಶ್ ಅರವಿಂದ್ ಬಿಡುಗಡೆ ಮಾಡಿದ್ದರು. ಟ್ರೈಲರ್ ಬಿಡುಗಡೆಯಾದ ಎರಡೇ ದಿನದಲ್ಲಿ ಲಕ್ಷ ವ್ಯೂ ದಾಟಿ ಈಗ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ಇದೆ. ಟ್ರೈಲರ್ ನೋಡಿದರೆ ಸಿನಿಮಾ ಮಾಸ್ ಸಿನಿಮಾದ ಎಲ್ಲಾ ಮಸಾಲೆ ಉಣಬಡಿಸುವುದು ಪಕ್ಕಾ ಎನಿಸುತ್ತಿದೆ.

ಜೂನ್ 14 ಕ್ಕೆ ಥಿಯೇಟರ್ ನಲ್ಲಿ ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದೆ. ಅನಿರುದ್ಧ್ ಗೆ ಜೋಡಿಯಾಗಿ ರಾಚೆಲ್ ಡೇವಿಡ್, ನಿಧಿ ಸುಬ್ಬಯ್ಯ ನಟಿಸಿದ್ದಾರೆ. ಇವರ ಜೊತೆಗೆ ಶರತ್ ಲೋಹಿತಾಶ್ವ, ಶಿವಮಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಂ ಆನಂದ್ ರಾಜ್ ನಿರ್ದೇಶನ ಮಾಡಿದ್ದು ರೂಪ ಡಿಎನ್ ನಿರ್ಮಾಣ ಮಾಡಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಮ್ಮನ ಹುಟ್ಟುಹಬ್ಬಕ್ಕೆ ಹೊಸ ಯೋಜನೆ ಕೈಗೊಂಡ ನಟ ಕಿಚ್ಚ ಸುದೀಪ್

ಗಂಡನ ಕೈಚಳಕದಲ್ಲೇ ಸೆರೆಯಾಗಲಿದೆ ಬಿಗ್‌ಬಾಸ್ ಖ್ಯಾತಿಯ ಗೌತಮಿ ಜಾಧವ್ ಮುಂದಿನ ಸಿನಿಮಾ‌‌

ಕಿಚ್ಚ ಸುದೀಪ್ ಬರ್ತ್ ಡೇ ಹಿಂದಿನ ದಿನ ಇಲ್ಲಿ ಅಭಿಮಾನಿಗಳಿಗೆ ಸಿಗ್ತಾರೆ

ನಟ ದರ್ಶನ್ ಗೆ ಮುಂದೆ ಎಲ್ಲಿ ಜೈಲೂಟ, ಇಂದು ನಿರ್ಧಾರ

ಮೈಸೂರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್

ಮುಂದಿನ ಸುದ್ದಿ
Show comments