ಕುತೂಹಲದ ಜ್ವರವೇರಿಸಿತು ಚೇಜ್ ಟೀಸರ್!

Webdunia
ಶುಕ್ರವಾರ, 22 ನವೆಂಬರ್ 2019 (19:58 IST)
ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಚೇಜ್. ಶೀರ್ಷಿಕೆಯಲ್ಲಿಯೇ ಒಂದು ಆವೇಗವನ್ನಿಟ್ಟುಕೊಂಡಿರೋ ಈ ಸಿನಿಮಾ ಥ್ರಿಲ್ಲರ್ ಅಂಶಗಳನ್ನೊಳಗೊಂಡಿದೆ ಎಂಬ ವಿಚಾರ ಇಯಾವತ್ತೋ ಪ್ರೇಕ್ಷಕರಿಗೆ ಸ್ಪಷ್ಟವಾಗಿತ್ತು. ಅಖಂಡ ಎರಡು ವರ್ಷಗಳ ಕಾಲ ರೂಪಿಸಲ್ಪಟ್ಟರೂ ಆರಂಭದಿಂದ ಈ ವರೆಗೂ ಈ ಸಿನಿಮಾದೆಡೆಗಿನ ಕುತೂಹಲ ಜ್ವರದಂತೆಯೇ ಏರಿಕೊಳ್ಳುತ್ತಿದೆ.
chase

ಇದೀಗ ಬಿಡುಗಡೆಯಾಗಿರೋ ಟೀಸರ್ ಅದನ್ನು ಮತ್ತಷ್ಟು ತೀವ್ರವಾಗಿಸುವಂತೆ ಮೂಡಿ ಬಂದಿದೆ. ಇದನ್ನು ಕಂಡು ಎಲ್ಲ ವರ್ಗದ ಪ್ರೇಕ್ಷಕರೂ ಥ್ರಿಲ್ ಆಗಿದ್ದಾರೆ. ಈ ಮೂಲಕ ಚೇಜ್ ಅನ್ನು ಆದಷ್ಟು ಬೇಗನೆ ಕಣ್ತುಂಬಿಕೊಳ್ಳಬೇಕೆಂಬ ತಹ ತಹ ಕೂಡಾ ತೀವ್ರವಾಗಿ ಬಿಟ್ಟಿದೆ.
 
ಸಿಂಪ್ಲಿ ಫನ್ ಮೀಡಿಯಾ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ವಿಲೋಕ್ ಶೆಟ್ಟಿಯವರ ಚೊಚ್ಚಲ ಪ್ರಯತ್ನ. ವಿಲೋಕ್ ಶೆಟ್ಟಿ ಸಾಹಿತ್ಯದತ್ತ ಬಹಳಷ್ಟು ಒಲವು ಹೊಂದಿಕೊಂಡೇ ಸಿನಿಮಾ ಧ್ಯಾನದಲ್ಲಿ ತಲ್ಲೀನವಾಗಿದ್ದ ಪ್ರತಿಭೆ. ಆ ಬಲದಿಂದಲೇ ಗಟ್ಟಿ ಕಥೆಯೊಂದನ್ನು ಸಿದ್ಧ ಪಡಿಸಿಕೊಂಡು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಸಸ್ಪೆನ್ಸ್ ಅಂಶಗಳನ್ನೊಳಗೊಂಡಿರೋ ಚಿತ್ರ. ಬೆಂಗಳೂರಿನಂಥಾ ನಗರಗಳಲ್ಲಿ ಮಹಿಳೆಯರು ರಾತ್ರಿ ಹೊತ್ತು ಒಂಟಿಯಾಗಿ ಓಡಾಡೋದು ಎಷ್ಟು ಸೇಫ್ ಎಂಬ ಸೂಕ್ಷ್ಮದಿಂದಲೇ ಬಿಚ್ಚಿಕೊಳ್ಳುವಂಥಾ ರೋಚಕ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಅದೆಷ್ಟು ರೋಚಕವಾಗಿದೆ ಅನ್ನೋದು ಇದೀಗ ಬಿಡುಗಡೆಯಾಗಿರೋ ಟೀಸರ್ ಮತ್ತು ಅದಕ್ಕೆ ಸಿಗುತ್ತಿರೋ ಅಭೂತಪೂರ್ವ ಪ್ರತಿಕ್ರಿಯೆಗಳೇ ಸಾಬೀತು ಮಾಡುತ್ತವೆ.
 
ವಿಲೋಕ್ ಶೆಟ್ಟಿ ಅಖಂಡ ಎರಡು ವರ್ಷಗಳ ಕಾಲ ಪರಿಶ್ರಮ ವಹಿಸಿ ರೂಪಿಸಿರೋ ಚಿತ್ರವಿದು. ಅದು ಈ ಟೀಸರ್ ಮೂಲಕ ಸಾರ್ಥಕಗೊಂಡಿದೆ. ಲಕ್ಷ ಲಕ್ಷ ವೀಕ್ಷಣೆ ಮತ್ತು ದಂಡಿ ದಂಡಿ ಸದಾಭಿಪ್ರಾಯಗಳೊಂದಿಗೆ ಅದೀಗ ವೈರಲ್ ಆಗಿ ಬಿಟ್ಟಿದೆ. ಇದರಲ್ಲಿನ ಚುರುಕುತನ, ಥ್ರಿಲ್ಲರ್ ಅಂಶಗಳು ಮತ್ತು ಬೆಚ್ಚಿ ಬೀಳಿಸುವಂಥಾ ಕ್ರೈಂ ಚಿತ್ರಣಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಈ ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನುಳಿದಂತೆ ಶೀತಲ್ ಶೆಟ್ಟಿ, ರಾಜೇಶ್ ನಟರಂಗ, ಸುಶಾಂತ್ ಪೂಜಾರಿ ಮುಂತಾದವರು ಕೂಡಾ ವೈಶಿಷ್ಟ್ಯ ಪೂರ್ಣವಾದ ಪಾತ್ರಗಳಿಗೆ ಜೀವ ತುಂಬಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments