Webdunia - Bharat's app for daily news and videos

Install App

ಜಪಾನ್‌ನಲ್ಲಿ ಬಿಡುಗಡೆಗೆ ಸಿದ್ಧವಾದ ಚಾರ್ಲಿ 777: ಕನ್ನಡ ಸಿನಿಮಾಕ್ಕೆ ಮತ್ತೊಂದು ಗರಿ

Sampriya
ಭಾನುವಾರ, 28 ಏಪ್ರಿಲ್ 2024 (13:51 IST)
Photo Courtesy X
ಬೆಂಗಳೂರು: ರಕ್ಷಿತ್‌ ಶೆಟ್ಟಿ ಅಭಿಯನದ ಚಾರ್ಲಿ 777 ಚಿತ್ರವು ಭಾರತದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಸದ್ದುಮಾಡಿತ್ತು. ಕಿರಣ್‌ ರಾಜ್‌ ನಿರ್ದೇಶನದ ಈ ಚಿತ್ರವು ಇದೀಗ ದೂರದ ಜಪಾನ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ಪರಂವಃ ಸ್ಟುಡಿಯೋಸ್ ಮೂಲಕ ನಿರ್ಮಾಣವಾದ 777 ಚಾರ್ಲಿ ಸಿನಿಮಾ  ಜಪಾನೀಸ್​ ಭಾಷೆಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಪ್ರಾಣಿಪ್ರಿಯರ ಮನಗೆದ್ದ ಈ ಸಿನಿಮಾವು ಜೂನ್ 28ರಂದು ಜಪಾನ್ ದೇಶದ ಹಲವು ನಗರಗಳಲ್ಲಿ 777 ಚಾರ್ಲಿ ರಿಲೀಸ್​ ಆಗಲಿದೆ.

ಬಾಲಿವುಡ್​ ಹಾಗೂ ಟಾಲಿವುಡ್​ನ ಹಲವು ಸಿನಿಮಾಗಳು ಜಪಾನ್​ನಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿದ್ದುಂಟು. ಈಗ ಕನ್ನಡದ ಒಂದು ಸಿನಿಮಾ ಜಪಾನ್​ನಲ್ಲಿ ತೆರೆ ಕಾಣಲು ಸಜ್ಜಾಗಿರುವುದು ಹೆಮ್ಮೆಯ ವಿಷಯ. 2023ರಲ್ಲಿ 777 ಚಾರ್ಲಿ ಸಿನಿಮಾ ಡಬ್‌ ಆಗಿ ಥೈಲ್ಯಾಂಡ್​ನಲ್ಲಿ ತೆರೆಕಂಡಿತ್ತು.

ಚಾರ್ಲಿ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

2022ರ ಜೂನ್ 10ರಂದು ಭಾರತದ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಈ ಸಿನಿಮಾ ಸೆಳೆದಿತ್ತು. ಬಿಗ್​ ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ, ರಾಜ್‌ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅನೇಕ ಪ್ರಶಸ್ತಿಗಳನ್ನ ಬಾಚಿಕೊಂಡ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟಿಗನ ಜತೆ ಪ್ರೀತಿಯಲ್ಲಿ ಬಿದ್ರಾ ರಶ್ಮಿಕಾ ಮಂದಣ್ಣ, ಇದಕ್ಕೆ ಕಾರಣ ಈ ಫೋಟೋ

ಈಕೆಯಾ ಮಹಾಕುಂಭಮೇಳದ ವೈರಲ್ ಹುಡುಗಿ ಅನ್ನುವಷ್ಟರ ಮಟ್ಟಿಗೆ ಬದಲಾದ ಮೊನಲಿಸಾ, Video

Mysore Sandal Soap: ತಮನ್ನಾ ಭಾಟಿಯಾರನ್ನು ವಜಾಗೊಳಿಸುವಂತೆ ಹೆಚ್ಚಿದ ಒತ್ತಾಯ

Actor Darshan: ಪವಿತ್ರಾ ಗೌಡ ಹೊಸ ಸ್ಟೇಟಸ್ ಹಿಂದಿನ ಟಾರ್ಗೆಟ್ ಯಾರು

Madenur Manu: ಗಂಡನ ಮೇಲೆ ಬಂದಿರುವ ರೇಪ್ ಕೇಸ್ ಬಗ್ಗೆ ಮಡೆನೂರು ಮನು ಪತ್ನಿ ಶಾಕಿಂಗ್ ಹೇಳಿಕೆ

ಮುಂದಿನ ಸುದ್ದಿ
Show comments