ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಮಾಸ್ ಅಭಿಮಾನಿಗಳು ಜಾಸ್ತಿ ಅಂದ್ಕೋತಾರೆ. ಅವರೆಲ್ಲಾ ಟ್ವಿಟ್ಟರ್, ಫೇಸ್‍ಬುಕ್, ವಾಟ್ಸಾಪ್ ಅಂತ ತಲೆಕೆಡಿಸಿಕೊಳ್ಳಲ್ಲ ಅಂತ ಅಂದುಕೊಳ್ಳುವವರೇ ಜಾಸ್ತಿ.
ಈ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದಾರೆ ’ಬಾಸ್’ ದರ್ಶನ್. ಈ ವರ್ಷ ಗೂಗಲ್‍ನಲ್ಲಿ ಅತಿಹೆಚ್ಚು ಹುಡುಕಾಟ ನಡೆಸಿರುವ ಸ್ಯಾಂಡಲ್‌ವುಡ್ ಹೀರೋಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.
ರಾಕಿಂಗ್ ಸ್ಟಾರ್ ಯಶ್‌ರನ್ನೂ ಹಿಂದಿಕ್ಕಿ ಅವರು ಮುಂದೆ ಹೋಗಿರುವುದು ವಿಶೇಷ. ಬಹುಶಃ ಈ ವರ್ಷ ದರ್ಶನ್ ಅವರ ಮನೆ ಕೇಸು, ರಾಜಕಾಲುವೆ ಒತ್ತುವರಿಯಂತಹ ವಿಚಾರಗಳು ಅವರನ್ನು ಹೆಚ್ಚು ಹುಡುಕಲು ಕಾರಣವಾಗಿರಬಹುದು.
ಆದರೆ ಸದಾ ಮಾಧ್ಯಮಗಳ ಜೊತೆಗೆ ವಿವಾದ, ವಿವಾಹ ಮತ್ತು ವಿಶೇಷ ಸುದ್ದಿಗಳಲ್ಲಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಎರಡನೇ ಸ್ಥಾನದಲ್ಲಿದ್ದಾರೆ. ಸದಾ ಪುಟಿಯುವ ಚೆಂಡಿನಂತಿರುವ ಕಿಚ್ಚ ಸುದೀಪ್ ಮೂರನೇ ಸ್ಥಾನದಲ್ಲಿದ್ದರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರದ್ದು ನಾಲ್ಕನೇ ಸ್ಥಾನ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.