Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ರಮೇಶ್ ಅರವಿಂದ್ ’ಪುಷ್ಪಕ ವಿಮಾನ’

ಹೊಸ ವರ್ಷಕ್ಕೆ ರಮೇಶ್ ಅರವಿಂದ್ ’ಪುಷ್ಪಕ ವಿಮಾನ’
Bangalore , ಮಂಗಳವಾರ, 20 ಡಿಸೆಂಬರ್ 2016 (11:11 IST)
ನಟ ರಮೇಶ್ ಅರವಿಂದ್ ಅಭಿನಯದ 100ನೇ ಚಿತ್ರ ಪುಷ್ಪಕ ವಿಮಾನ ತೆರೆಯ ಮೇಲೆ ಹಾರಾಟಕ್ಕೆ ಸಿದ್ಧವಾಗಿದೆ. ಇನ್ನೇನು ಸೆನ್ಸಾರ್ ಮಂಡಳಿ ಮುಂದೆ ಬಂದಿದ್ದು, ಅದು ಮುಗಿಯುತ್ತಿದ್ದಂತೆ ಜನವರಿಯಲ್ಲಿ ತೆರೆಗೆ ಬರಲಿದೆ. 
 
ಎಸ್ ರವೀಂದ್ರನಾಥ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಚಿತ್ರದಲ್ಲಿ ಗ್ರಾಫಿಕ್ಸ್ ಮೂಲಕ ಸೃಷ್ಟಿಸಿರುವ ವಿಮಾನವೂ ಒಂದು ಪಾತ್ರವಾಗಲಿ ಕಾಣಲಿದೆ ಎನ್ನುತ್ತಾರೆ ನಿರ್ದೇಶಕರು. ತಂದೆ ಮಗಳ ನಡುವೆ ಕೊಂಡಿಯಾ ವಿಮಾನವೂ ಪಾತ್ರದ ಭಾಗವಾಗಲಿದೆ. 
 
ರಮೇಶ್ ಅರವಿಂದ್ ಮಗಳಾಗಿ ಯುವಿನಾ ಪಾರ್ಥವಿಯಾ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಮಾನ ಹಲವು ತಿರುವುಗಳಿಗೆ ಕಾರಣವಾಗುತ್ತದಂತೆ. ಇದೊಂದು ತರಹ ಜೋಕರ್, ಗಿಫ್ಟ್ ಆಗಿ ಕಾಣಿಸಲಿದೆ ಎನ್ನುತ್ತಾರೆ ನಿರ್ದೇಶಕರು. ರವಿತಾ ರಾಮ್, ಜೂಹಿ ಚಾವ್ಲಾ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್‌ವುಡ್ ರೋಜ್ ಶ್ರಾವ್ಯಾ ರಾವ್ ’ಕಲ್ಯಾಣ’