Select Your Language

Notifications

webdunia
webdunia
webdunia
webdunia

ಅಳಿಯನ ಚಿತ್ರದ ಟ್ರೈಲರ್ ಇಂದು ಡಿ ಬಾಸ್ ದರ್ಶನ್ ರಿಂದ ಬಿಡುಗಡೆ

ಅಳಿಯನ ಚಿತ್ರದ ಟ್ರೈಲರ್ ಇಂದು ಡಿ ಬಾಸ್ ದರ್ಶನ್ ರಿಂದ ಬಿಡುಗಡೆ
ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2019 (09:36 IST)
ಬೆಂಗಳೂರು: ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ನಾಯಕರಾಗಿ ಅಭಿನಯಿಸಿರುವ ಟಕ್ಕರ್ ಸಿನಿಮಾ ಟ್ರೈಲರ್ ಇಂದು ಬಿಡುಗಡೆಯಾಗಲಿದೆ.


ಇಂದು ಸಂಜೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಕ್ಕರ್ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ನಟರಿಂದ ಹೊಸಬರ ಚಿತ್ರದ ಟ್ರೈಲರ್, ಟೀಸರ್ ಬಿಡುಗಡೆ ಮಾಡಿಸಿ ಅದಕ್ಕೆ ಹೆಚ್ಚಿನ ಪ್ರಚಾರ ಕೊಡುವ ಪ್ರಯತ್ನ ನಡೆಸಲಾಗುತ್ತಿದೆ.

ಆ ಪೈಕಿ ಟಕ್ಕರ್ ಕೂಡಾ ಸೇರಿಕೊಂಡಿದೆ. ಹೇಳಿ ಕೇಳಿ ಅಳಿಯನ ಸಿನಿಮಾ. ಹೀಗಾಗಿ ದರ್ಶನ್ ಚಿತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಇಂದೇ ಅಡಿಯೋ ಕೂಡಾ ರಿಲೀಸ್ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

101 ನೇ ಸಿನಿಮಾ ಹೊಸ್ತಿಲಲ್ಲಿ ಹಳೆಯ ನೆನಪಿಗೆ ಜಾರಿದ ರಮೇಶ್ ಅರವಿಂದ್