Webdunia - Bharat's app for daily news and videos

Install App

ಡೆವಿಲ್ ಮೇಕಿಂಗ್ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಭಿನ್ನ ಅವತಾರ

Krishnaveni K
ಶುಕ್ರವಾರ, 10 ಮೇ 2024 (14:09 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಇದರಲ್ಲಿ ದರ್ಶನ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

ಇಂದು ಅಕ್ಷಯ ತೃತೀಯ ಪ್ರಯುಕ್ತ ಚಿತ್ರತಂಡ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದೆ. ಮೇಕಿಂಗ್ ನಲ್ಲಿ ದರ್ಶನ್ ದೇಹ ದಾರ್ಡ್ಯವೇ ಎಲ್ಲರ ಗಮನ ಸೆಳೆಯುತ್ತಿದೆ. ಈ ಚಿತ್ರಕ್ಕಾಗಿ ದರ್ಶನ್ ತೂಕ ಹೆಚ್ಚಿಸಿಕೊಂಡಂತೆ ಕಾಣುತ್ತಾರೆ. ಟೀಸರ್ ನೋಡಿದರೆ ದರ್ಶನ್ ಗ್ಯಾಂಗ್‍ ಸ್ಟರ್ ನ ಪಾತ್ರ ಮಾಡುವಂತಿದೆ. ಹೀಗಾಗಿ ಅದಕ್ಕೆ ತಕ್ಕಂತೆ ತಮ್ಮ ಮೈಕಟ್ಟು ಬೆಳೆಸಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ಗೆ ಮಿಲನದಂತಹ ಹಿಟ್ ಸಿನಿಮಾ ಕೊಟ್ಟಿದ್ದ ಪ್ರಕಾಶ್ ವೀರ್ ಈ ಸಿನಿಮಾ ಮಾಡುತ್ತಿದ್ದಾರೆ. ಇಷ್ಟರವರೆಗೆ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಮಾಡಿದ್ದ ಪ್ರಕಾಶ್ ವೀರ್ ಈಗ ಏಕಾಏಕಿ ಗ್ಯಾಂಗ್ ಸ್ಟರ್ ಕತೆಯಿರುವ ಮಾಸ್ ಸಿನಿಮಾ ಮಾಡಲು ಮುಂದಾಗಿರುವುದು ವಿಶೇಷ.

ಬೆಂಗಳೂರಿನ ವಿಶೇಷ ಸೆಟ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದಕ್ಕೆ ಮೊದಲು ದರ್ಶನ್ ನಾಯಕರಾಗಿದ್ದ ಕಾಟೇರ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಡೆವಿಲ್ ಸಿನಿಮಾ ಮೂಲಕ ದರ್ಶನ್ ಮತ್ತೊಂದು ಮಾಸ್ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲು ತಯಾರಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೈಸೂರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್

ಟಾಕ್ಸಿಕ್ ಬಳಿಕ ಮತ್ತೊಂದು ಬಿಗ್ ಸ್ಟಾರ್ ಸಿನಿಮಾಗೆ ನಾಯಕಿಯಾದ ರುಕ್ಮಿಣಿ ವಸಂತ್

ದಿಡೀರ್ ಆಗಿ ಅಭಿಮಾನಿಗಳಿಗೆ ಒಂದು ಮೆಸೇಜ್ ಕೊಟ್ಟ ರಾಜ್ ಬಿ ಶೆಟ್ಟಿ

ವಿಷ್ಣುವರ್ಧನ್ ಇರುವ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು: ವಿವಾದಕ್ಕೆ ಟ್ವಿಸ್ಟ್

ಜೈಲು ಪಾಲಾದ ದರ್ಶನ್ ಪತ್ನಿಗೆ ಅಶ್ಲೀಲ ಕಮೆಂಟ್ಸ್‌: ವಿಜಯಲಕ್ಷ್ಮಿಗೆ ಮಹಿಳಾ ಆಯೋಗ ಅಭಯ

ಮುಂದಿನ ಸುದ್ದಿ
Show comments