ಸಿಸಿಎಲ್ ಇಂದಿನಿಂದ: ಬೆಂಗಾಳ್ ಟೈಗರ್ಸ್ ವಿರುದ್ಧ ಕಿಚ್ಚನ ಟೀಂ ಪಂದ್ಯ

Webdunia
ಶನಿವಾರ, 18 ಫೆಬ್ರವರಿ 2023 (09:46 IST)
Photo Courtesy: Twitter
ರಾಯ್ಪುರ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಇಂದಿನಿಂದ ಚಾಲನೆ ಸಿಗುತ್ತಿದ್ದು, ಇಂದು ಕರ್ನಾಟಕ ಬುಲ್ಡೋಜರ್ಸ್ ಮತ್ತು ಬೆಂಗಾಳ್ ಟೈಗರ್ಸ್ ನಡುವೆ ಪಂದ್ಯ ನಡೆಯಲಿದೆ.

ರಾಯ್ಪುರದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಗೆ ಜಿಶು ಸೇನ್ ಗುಪ್ತಾ ನೇತೃತ್ವದ ಬೆಂಗಾಳ್ ಟೈಗರ್ಸ್ ಎದುರಾಳಿಯಾಗಿದೆ.

ವಿವಿಧ ಸಿನಿಮಾ ರಂಗದ ಒಟ್ಟು 8 ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ನ ಭಾಗವಾಗಿದೆ. ಕರ್ನಾಟಕ ಬುಲ್ಡೋಜರ್ಸ್ ಆಡುವ ಪಂದ್ಯಗಳ ನೇರಪ್ರಸಾರವನ್ನು ಜೀ ಪಿಚ್ಚರ್ಸ್ ಮತ್ತು ಜೀ ಬಂಗಾಲ್ ವಾಹಿನಿಯಲ್ಲಿ ವೀಕ್ಷಿಸಬಹುದು. ಎಲ್ಲಾ ತಂಡಗಳ ಪಂದ್ಯಗಳ ನೇರಪ್ರಸಾರವಾಗಿದ್ದು ಒಟ್ಟು 9 ವಾಹಿನಿಗಳಲ್ಲಿ ನೇರಪ್ರಸಾರವಿರಲಿದೆ.

ಕರ್ನಾಟಕ ತಂಡದಲ್ಲಿ ಕಿಚ್ಚ ಸುದೀಪ್, ಪ್ರದೀಪ್, ಜಯರಾಮ್ ಕಾರ್ತಿಕ್, ಚಂದನ್ ಕುಮಾರ್, ರಾಜೀವ್ ಸೇರಿದಂತೆ ಘಟಾನುಘಟಿಗಳಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ಇದಕ್ಕೆ ಮೊದಲು ಎರಡು ಬಾರಿ ಸಿಸಿಎಲ್ ಚಾಂಪಿಯನ್ ಆಗಿತ್ತು. ಇಂದಿನ ಪಂದ್ಯ 2.30 ಕ್ಕೆ ಆರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಂಡ ರೋಷನ್ ಅಡುಗೆ ಕೈ ರುಚಿಗೆ ಮನಸೋತ ಅನುಶ್ರೀ

ಕಾಂತಾರ ಚಾಪ್ಟರ್ 1 ವಿರುದ್ಧ ದೈವಕ್ಕೇ ದೂರು

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಬಿಗ್ ಬಾಸ್ ರಾತ್ರೋ ರಾತ್ರಿ ತೆರೆಯಲು ಕಿಚ್ಚ ಸುದೀಪ್ ಕರೆ ಮಾಡಿದ್ದು ಯಾರಿಗೆ

ಅ‍ಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿ ಪಂಜಾಬಿ ಗಾಯಕ ರಾಜವೀರ್ ಜವಾಂಡ ನಿಧನ

ಮುಂದಿನ ಸುದ್ದಿ
Show comments